Advertisement
ಯಶಸ್ವಿ ಜೈಸ್ವಾಲ್ 69ನೇ ರ್‍ಯಾಂಕಿಂಗ್‌ನೊಂದಿಗೆ ಇಂಗ್ಲೆಂಡ್ ಎದುರಿನ ಸರಣಿ ಆರಂಭಿಸಿದ್ದರು. ಸತತ ಎರಡು ದ್ವಿಶತಕ, ರಾಂಚಿ ಟೆಸ್ಟ್‌ನಲ್ಲಿ ಬಾರಿಸಿದ 73 ಹಾಗೂ 37 ರನ್ ಸಾಧನೆಯಿಂದಾಗಿ ಈಗ 12ನೇ ಸ್ಥಾನ ತಲುಪಿದ್ದಾರೆ (727). ಈ ಪಂದ್ಯಕ್ಕೂ ಮುನ್ನ 15ನೇ ಸ್ಥಾನದಲ್ಲಿದ್ದರು. ಸರಣಿ ಮುಗಿದ ಬಳಿಕ ಟಾಪ್-10 ಯಾದಿಯಲ್ಲಿ ಕಾಣಿಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ.
Related Articles
Advertisement
ಬೌಲಿಂಗ್ ರ್ಯಾಂಕಿಂಗ್ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿ ಜಸ್‌ಪ್ರೀತ್ ಬುಮ್ರಾ (867) ಮತ್ತು ದ್ವಿತೀಯ ಸ್ಥಾನಿ ಆರ್. ಅಶ್ವಿನ್ (846) ನಡುವಿನ ಅಂಕಗಳ ಅಂತರ ಕಡಿಮೆ ಯಾಗಿದೆ. ಬುಮ್ರಾಗೆ ರಾಂಚಿ ಟೆಸ್ಟ್ ಪಂದ್ಯ ದಲ್ಲಿ ವಿರಾಮ ನೀಡಲಾಗಿತ್ತು. ಚೈನಾಮನ್ ಬೌಲರ್ ಕುಲದೀಪ್ ಯಾದವ್ 10 ಸ್ಥಾನಗಳ ಪ್ರಗತಿ ಸಾಧಿಸಿದ್ದು, 32ನೇ ರ್‍ಯಾಂಕಿಂಗ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಂಚಿಯಲ್ಲಿ ಮಿಂಚಿದ ಇಂಗ್ಲೆಂಡ್‌ನ ಸ್ಪಿನ್ನರ್ ಶೋಯಿಬ್ ಬಶೀರ್ ಒಮ್ಮೆಲೇ 38 ಸ್ಥಾನ ಮೇಲೇರಿದ್ದು, ಜೀವನಶ್ರೇಷ್ಠ 80ನೇ ರ್‍ಯಾಂಕಿಂಗ್ ಪಡೆದಿದ್ದಾರೆ. ಆರಂಭಕಾರ ಜಾಕ್ ಕ್ರಾಲಿ ಮೊದಲ ಸಲ ಟಾಪ್-20 ಯಾದಿಯಲ್ಲಿ ಕಾಣಿಸಿಕೊಂಡಿ ದ್ದಾರೆ. ರಾಂಚಿಯಲ್ಲಿ ಇವರ ಸಾಧನೆ 42 ಹಾಗೂ 60 ರನ್. ಹಾಗೆಯೇ ಆಸ್ಟ್ರೇಲಿಯದ ಟ್ರ್ಯಾವಿಸ್ ಹೆಡ್ ಕೂಡ ಮೊದಲ ಬಾರಿಗೆ ಅಗ್ರ ಇಪ್ಪತ್ತರಲ್ಲಿ ಸ್ಥಾನ ಪಡೆದಿದ್ದಾರೆ.