Advertisement

Test: ಪಾಕಿಸ್ಥಾನ ವಿರುದ್ಧ 6ಕ್ಕೆ 26ರಿಂದ 262ಕ್ಕೆ ಬೆಳೆದ ಬಾಂಗ್ಲಾ!

12:05 AM Sep 02, 2024 | Team Udayavani |

ರಾವಲ್ಪಿಂಡಿ: ಪಾಕಿಸ್ಥಾನ ವಿರುದ್ಧದ ರಾವಲ್ಪಿಂಡಿ ಟೆಸ್ಟ್‌ ಪಂದ್ಯದಲ್ಲಿ 26 ರನ್ನಿಗೆ 6 ವಿಕೆಟ್‌ ಉದುರಿಸಿಕೊಂಡ ಬಳಿಕ ಅಮೋಘ ಬ್ಯಾಟಿಂಗ್‌ ಹೋರಾಟವನ್ನು ಸಂಘಟಿಸಿದ ಬಾಂಗ್ಲಾದೇಶ, ತನ್ನ ಮೊತ್ತವನ್ನು 262ಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕೇವಲ 12 ರನ್‌ ಹಿನ್ನಡೆಗೆ ಸಿಲುಕಿದೆ. 3ನೇ ದಿನದಾಟದ ಅಂತ್ಯಕ್ಕೆ ಪಾಕ್‌ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 2 ವಿಕೆಟಿಗೆ 9 ರನ್‌ ಮಾಡಿ ಆಘಾತ ಅನುಭವಿಸಿದೆ.

Advertisement

ಬಾಂಗ್ಲಾದೇಶವನ್ನು ಮೇಲೆತ್ತಿದವರು ಕೀಪರ್‌ ಲಿಟನ್‌ ದಾಸ್‌ ಮತ್ತು ಆಲ್‌ರೌಂಡರ್‌ ಮೆಹಿದಿ ಹಸನ್‌ ಮಿರಾಜ್‌. ದಾಸ್‌ 128 ರನ್‌ ಹಾಗೂ ಮಿರಾಜ್‌ 78 ರನ್‌ ಹೊಡೆದು ಪಾಕ್‌ ಬೌಲರ್‌ಗಳ ಆರಂಭಿಕ ಮೇಲುಗೈಗೆ ತಡೆಯೊಡ್ಡಿದರು. ಇವರಿಬ್ಬರ 7ನೇ ವಿಕೆಟ್‌ ಜತೆಯಾಟದಲ್ಲಿ 165 ರನ್‌ ಒಟ್ಟುಗೂಡಿತು. ಇವರಿಬ್ಬರನ್ನು ಹೊರತುಪಡಿಸಿದರೆ ಅಜೇಯ 13 ರನ್‌ ಮಾಡಿದ ಹಸನ್‌ ಮಹ್ಮದ್‌ ಅವರದೇ ಹೆಚ್ಚಿನ ಗಳಿಕೆ.

ಇದು ಲಿಟನ್‌ ದಾಸ್‌ ಅವರ 43ನೇ ಟೆಸ್ಟ್‌ ಹಾಗೂ 4ನೇ ಶತಕ. 228 ಎಸೆತಗಳನ್ನು ಎದುರಿಸಿ ನಿಂತ ದಾಸ್‌ 13 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿದರು. ಬೌಲಿಂಗ್‌ ದಾಳಿಯ ವೇಳೆ 5 ವಿಕೆಟ್‌ ಉಡಾಯಿಸಿದ್ದ ಮಿರಾಜ್‌ 124 ಎಸೆತ ನಿಭಾಯಿಸಿದರು. ಸಿಡಿಸಿದ್ದು 12 ಬೌಂಡರಿ ಹಾಗೂ ಒಂದು ಸಿಕ್ಸರ್‌.

ಬಲಗೈ ಮಧ್ಯಮ ವೇಗಿ ಖುರ್ರಂ ಶಾಜಾದ್‌ 90 ರನ್ನಿಗೆ 6 ವಿಕೆಟ್‌ ಉಡಾಯಿಸಿ ಬಾಂಗ್ಲಾದ ಅಗ್ರ ಕ್ರಮಾಂಕದ ಮೇಲೆರಗಿದರು. ಮಿರ್‌ ಹಮ್ಜಾ ಮತ್ತು ಆಘಾ ಸಲ್ಮಾನ್‌ ತಲಾ 2 ವಿಕೆಟ್‌ ಕೆಡವಿದರು.

Advertisement

Udayavani is now on Telegram. Click here to join our channel and stay updated with the latest news.

Next