Advertisement

ಟೆಸ್ಟ್‌: ಬಾಂಗ್ಲಾಕ್ಕೆ ಜಿಂಬಾಬ್ವೆ ಬ್ರೇಕ್‌

06:30 AM Nov 05, 2018 | |

ಸಿಲೆಟ್‌: ಜಿಂಬಾಬ್ವೆ ಬೌಲಿಂಗ್‌ ದಾಳಿಗೆ ತತ್ತರಿಸಿದ ಆತಿಥೇಯ ಬಾಂಗ್ಲಾದೇಶ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ 139 ರನ್ನುಗಳ ಹಿನ್ನಡೆಗೆ ಸಿಲುಕಿದೆ. ಜಿಂಬಾಬ್ವೆಯ 282ಕ್ಕೆ ಉತ್ತರವಾಗಿ 143 ರನ್ನಿಗೆ ಮೊದಲ ಇನ್ನಿಂಗ್ಸ್‌ ಆಟ ಮುಗಿಸಿದೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಜಿಂಬಾಬ್ವೆ ವಿಕೆಟ್‌ ನಷ್ಟವಿಲ್ಲದೆ ಒಂದು ರನ್‌ ಮಾಡಿದೆ.

Advertisement

5ಕ್ಕೆ 236 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ಜಿಂಬಾಬ್ವೆ ದಿಢೀರ್‌ ಕುಸಿತಕ್ಕೆ ಸಿಲುಕಿ 46 ರನ್‌ ಸೇರಿಸುವಷ್ಟರಲ್ಲಿ ಉಳಿದೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಮ್‌ 108 ರನ್ನಿಗೆ 6 ವಿಕೆಟ್‌ ಉರುಳಿಸಿ ಮೆರೆದರು.ಆದರೆ ಬಾಂಗ್ಲಾದ ಕುಸಿತ ಇದಕ್ಕಿಂತ ತೀವ್ರವಾಗಿತ್ತು. 49 ರನ್‌ ಗಳಿಸುವಷ್ಟರಲ್ಲಿ ಅರ್ಧದಷ್ಟು ಮಂದಿ ಪೆವಿಲಿಯನ್‌ ಸೇರಿಯಾಗಿತ್ತು. ಮುಶ್ಫಿಕರ್‌ ರಹೀಂ (31) ಮತ್ತು ಅರೀಫ‌ುಲ್‌ ಹಕ್‌ (ಔಟಾಗದೆ 41) ಸಣ್ಣ ಮಟ್ಟದ ಹೋರಾಟ ಸಂಘಟಿಸಿದರು.

ಟೆಂಡೈ ಚಟಾರ ಮತ್ತು ಸಿಕಂದರ್‌ ರಾಜ ತಲಾ 3 ವಿಕೆಟ್‌ ಉರುಳಿಸಿ ಬಾಂಗ್ಲಾವನ್ನು ಬೆದರಿಸಿದರು. ಕೈಲ್‌ ಜಾರ್ವಿಸ್‌ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next