Advertisement
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಮತ್ತು ಎಡಗೈ ಸ್ಪಿನ್ನರ್ ಆ್ಯಶrನ್ ಅಗರ್ ಇದರಲ್ಲಿ ಸ್ಥಾನ ಪಡೆ ದಿದ್ದಾರೆ. ಇವರಲ್ಲಿ ಖ್ವಾಜಾಗೆ 7 ತಿಂಗಳ ಬಳಿಕ ಆಸೀಸ್ ತಂಡದಲ್ಲಿ ಆಡುವ ಅವಕಾಶ ಲಭಿಸಿದೆ. ಖ್ವಾಜಾ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದ್ದು, ಆಗ ನಾಯಕ ಸ್ಟೀವನ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬರಬಹುದು.
ಆಸ್ಟ್ರೇಲಿಯ 2011ರಲ್ಲಿ ಶ್ರೀಲಂಕಾವನ್ನು 1-0 ಅಂತರದಿಂದ ಸೋಲಿಸಿದ ಬಳಿಕ ಏಶ್ಯದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ 2 ಪಂದ್ಯಗಳ ಈ ಕಿರು ಸರಣಿ ಭಾರೀ ಕುತೂಹಲ ಮೂಡಿಸಿದೆ. ಆಸೀಸ್ ತಂಡ ಬಾಂಗ್ಲಾದಲ್ಲಿ 2006ರ ಬಳಿಕ ಮೊದಲ ಟೆಸ್ಟ್ ಆಡುತ್ತಿದೆ. ಅಂದು ರಿಕಿ ಪಾಂಟಿಂಗ್ ಸಾರಥ್ಯದ ಕಾಂಗರೂ ಪಡೆ ಇಲ್ಲಿ ಕೊನೆಯ ಸಲ ಟೆಸ್ಟ್ ಆಡಿತ್ತು. 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದಿತ್ತು. ಇತ್ತಂಡಗಳ ನಡುವೆ ಈವರೆಗೆ ನಡೆದದ್ದು ಕೇವಲ 4 ಟೆಸ್ಟ್ ಪಂದ್ಯ ಮಾತ್ರ. ಇವೆಲ್ಲವನ್ನೂ ಆಸ್ಟ್ರೇಲಿಯ ಗೆದ್ದಿದೆ.