ಶ್ರೀನಗರ: ಸೇನೆಯ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳಲು ಉಗ್ರ ನುಸುಳುಕೋರರು ಕಾಶ್ಮೀರ ಗಡಿಯಲ್ಲಿ ಭೂಗತ ಬಂಕರ್‌ಗಳ ಮೊರೆ ಹೋಗುತ್ತಿದ್ದಾರೆ!
ಸೇಬಿನ ತೋಟಗಳು, ನದಿಗಳ ಅಡಿಯಲ್ಲೂ ಇಂಥ ಬಂಕರ್‌ಗಳನ್ನು ನಿರ್ಮಿಸಿರುವ ಸಂಗತಿ ತಡವಾಗಿ ಸ್ಫೋಟಗೊಂಡಿದೆ.
ಪುಲ್ವಾಮಾ, ಶೋಪಿಯಾನ್ ಜಿಲ್ಲೆಗಳಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವುದನ್ನು ನೋಡಿದ್ದೇವೆ.
ರಾಂಬಿ ಅರಾ ನದಿಯ ಮಧ್ಯದಲ್ಲಿ ಕಬ್ಬಿಣದ ಬಂಕರ್ ನಿರ್ಮಿಸಿದ್ದ ಸಂಗತಿ ನಮಗೆ ಆಘಾತ ನೀಡಿತ್ತು.
ಸೇಬಿನ ತೋಟಗಳ ಅಡಿಯಲ್ಲೂ ಇಂಥದ್ದೇ ಮಾದರಿಯ ಬಂಕರ್‌ಗಳನ್ನು ನಿರ್ಮಿಸಿದ್ದರು. ಇದಕ್ಕಾಗಿ ಉಗ್ರರು ಖಾಲಿ ಟಾರ್ ಬ್ಯಾರೆಲ್‌ಗಳನ್ನು ಬಳಸಿಕೊಂಡಿದ್ದರು’ ಎಂದು 44 ರಾಷ್ಟ್ರೀಯ ರೈಫಲ್ಸ್ ಮುಖ್ಯಸ್ಥ ಕ್ಯಾ. ಎ.ಕೆ. ಸಿಂಗ್ ತಿಳಿಸಿದ್ದಾರೆ.