ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಗಾಯಗೊಂಡಿದ್ದಾರೆ.
ಶೋಫಿಯಾನ್ ಜಿಲ್ಲೆಯ ಜೈನಾಪೋರಾದ ಕ್ರಾಲ್ಚೆಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಮಂದಿ ಉಗ್ರರು ಏಕಾಎಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಭಯೋತ್ಪಾದಕರು ಸಿಆರ್‌ಪಿಎಫ್ ತಂಡದ ಮೇಲೆ ಗುಂಡು ಹಾರಿಸಿದರು. ಇದರಿಂದ ಓರ್ವ ಯೋಧ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಿಟಿ ಅಜಯ್ ಕುಮಾರ್ ಕೈಗೆ ಗುಂಡು ತಾಗಿ ಗಾಯವಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಿಬಲ್ ಮನೆಯಲ್ಲಿ ವಿಪಕ್ಷ ನಾಯಕರ ಔತಣಕೂಟ: ಗಾಂಧಿ ಕುಟುಂಬ ನಾಯಕತ್ವಕ್ಕೆ ವಿರೋಧ
ಭಯೋತ್ಪಾದಕರು ಗುಂಡು ಹಾರಿಸಿದ ನಂತರ, ಸೇನೆಯೂ ಪ್ರತಿದಾಳಿ ನಡೆಸಿತು. ಹುಡುಕಾಟದ ಸಮಯದಲ್ಲಿ, ತುಂಬಿದ್ದ ಒಂದು ಮ್ಯಾಗಜಿನ್ ನ್ನು ವಶಕ್ಕೆ ಪಡೆಯಲಾಯಿತು. ಈತನ್ಮಧ್ಯೆ, ಉಗ್ರರನ್ನು ಹಿಡಿಯಲು ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ.
ಕಾಶ್ಮೀರಕ್ಕೆ 2 ದಿನಗಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಳಮಲ್ ಗಂದರ್ ಬಾಲ್‌ನಲ್ಲಿರುವ ಮಾತಾ ಖೀರ್ ಬವಾನಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ಶ್ರೀನಗರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯನ್ನು ಉದ್ಘಾಟಿಸುವ ಮೊದಲು ಹಜರತ್‌ಬಾಲ್ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ದಾಳಿ ನಡೆದಿದ್ದು, ಆತಂಕ ಹೆಚ್ಚಿಸಿದೆ.