Advertisement

Jammu Kashmir; ಕಥುವಾ ದಾಳಿಗೆ ಉಗ್ರರಿಂದ ಅಮೆರಿಕದ ಶಸ್ತ್ರಾಸ್ತ್ರ ಬಳಕೆ!

11:34 PM Jul 09, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ದಲ್ಲಿ ಸೋಮ ವಾರ ಪಾಕ್‌ ಉಗ್ರರು ನಡೆಸಿದ ದಾಳಿಯಲ್ಲಿ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡ ಲಾಗಿದೆ. ಅಲ್ಲದೇ ಗಸ್ತು ಪಡೆಯ ಮೇಲಿನ ದಾಳಿಗೆ ಯಾರೋ ಸ್ಥಳೀಯರ ನೆರವನ್ನು ಉಗ್ರರು ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Advertisement

ಸೋಮವಾರ ನಡೆದಿದ್ದ ಈ ದಾಳಿಯಲ್ಲಿ 5 ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆದ ಬದ್ನೋಟವು ಗುಡ್ಡ ಗಾಡು ಪ್ರದೇಶವಾಗಿದ್ದು,  ಗಂಟೆಗೆ 10-15 ಕಿ.ಮೀ.ವೇಗದಲ್ಲಿ ಸಂಚರಿಸ ಬಹುದು. ಈ ಮಾಹಿತಿಯನ್ನು ಸ್ಥಳೀಯರಿಂದಲೇ ಕಲೆ ಹಾಕಿ ರುವ ಶಂಕೆ ಇದೆ. ಗಸ್ತು ವಾಹನ ನಿಧಾನವಾಗಿ ಸಂಚರಿಸುತ್ತಿರುವುದನ್ನು ಗಮನಿಸಿ ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಬಳಿಕ ಪ್ರದೇಶದಲ್ಲೇ ಅವಿತಿದ್ದ 2-3 ಉಗ್ರರು ಸೇರಿ ಭದ್ರತಾ ಸಿಬಂದಿ ಮೇಲೆ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್‌ ರೈಫ‌ಲ್ಸ್‌ಗಳಿಂದ ಗುಂಡಿನ ಮಳೆಗರೆದಿದ್ದಾರೆ. ಈ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಉಗ್ರರ ಹೆಡೆಮುರಿ ಕಟ್ಟಲು ಎನ್‌ಐಎ ತನಿಖೆ ಶುರು

ಭದ್ರತಾ ಪಡೆ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಹೆಡೆ ಮುರಿ ಕಟ್ಟಲು ರಾಷ್ಟ್ರೀಯ ತನಿಖಾ ಸಂಸ್ಥೆಯೂ ಸಜ್ಜಾಗಿದೆ. ಜಮ್ಮು- ಕಾಶ್ಮೀರ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಹಾಯ ಮಾಡಲು  ಎನ್‌ಐಎ ಅಧಿಕಾರಿಗಳ ತಂಡ ವೊಂದು ಕಥುವಾಗೆ ಬಂದಿಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next