ಗಾಂಧಿನಗರ: ಸ್ವಾತಂತ್ರ್ಯ ಹೋರಾಟದ ವೇಳೆಯಲ್ಲೇ ಉಗ್ರವಾದ ಆರಂಭವಾಗಿತ್ತು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ಥಾನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗಾಂಧಿನಗರದ ಲಾವಡ್‌ನಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ 3 ನೇ ಘಟಿಕೋತ್ಸವದಲ್ಲಿ ಮಾತನಾಡಿ, ಭಯೋತ್ಪಾದನೆಯು ಭಾರತಕ್ಕೆ ಬಹಳ ಹಿಂದಿನಿಂದಲೂ ಒಂದು ನಿರ್ದಿಷ್ಟ ಸವಾಲಾಗಿದೆ ಎಂದರು.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಅಗತ್ಯವನ್ನು ಪ್ರತಿಪಾದಿಸಿ, ಭಾರತವು ಸ್ವಾತಂತ್ರ್ಯದ ನಂತರ ಈ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಒತ್ತಿ ಹೇಳಿದರು. ಮುಂಬೈನಲ್ಲಿ ಲಷ್ಕರ್-ಎ-ತಯ್ಬಾ (ಎಲ್‌ಇಟಿ) ನಡೆಸಿದ 26/11 ದಾಳಿಯನ್ನು ಭಾರತದಲ್ಲಿ ಭಯೋತ್ಪಾದನೆಯ ಪ್ರಮುಖ ಕ್ಷಣ. ನಮ್ಮ ಸ್ವಾತಂತ್ರ್ಯದ ಕ್ಷಣದಲ್ಲಿ ಭಯೋತ್ಪಾದನೆ ಪ್ರಾರಂಭವಾಯಿತು, ಪಾಕಿಸ್ಥಾನದಾದ್ಯಂತ ಉಗ್ರರು ಹುಟ್ಟಿಕೊಂಡರು” ಎಂದು ಜೈಶಂಕರ್ ಕಿಡಿ ಕಾರಿದರು.
ಯಾರಾದರೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದರೆ ಅದನ್ನು ಎದುರಿಸುವಲ್ಲಿ ಪ್ರತಿಕ್ರಿಯೆಯು ಪ್ರಮುಖ ಅಂಶವಾಗಿದೆ ಎಂದರು.
“ಭಯೋತ್ಪಾದನೆ ನಮ್ಮ ಸಾಮರ್ಥ್ಯಗಳು ಮತ್ತು ನಮ್ಮ ಕಲ್ಪನೆಗಳೆರಡಕ್ಕೂ ಸವಾಲು ಹಾಕುತ್ತಿದೆ. ನಮ್ಮ ಆಸಕ್ತಿಗಳು ವಿಸ್ತರಿಸಿದಂತೆ, ನಾವು ಇತರರ ಭದ್ರತೆಗೆ ಕೊಡುಗೆ ನೀಡಲು ಶ್ರಮಿಸಬೇಕು” ಎಂದರು.