Advertisement

Modi ಪ್ರಧಾನಿಯಾದ ಮೇಲೆ ಭಯೋತ್ಪಾದನೆ ಶೇ.75 ರಷ್ಟು ಕಡಿಮೆ:ಜೋಶಿ

08:14 PM Feb 14, 2024 | Team Udayavani |

ಧಾರವಾಡ : 2014 ರಿಂದ ಕಳೆದ ಹತ್ತು ವರ್ಷದಲ್ಲಿ ಅಂದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ದೇಶದಲ್ಲಿ ಶೇ.75 ರಷ್ಟು ಭಯೋತ್ಪಾದನೆ ಮತ್ತು ನಕ್ಸಲೀಯ ಚಟುವಟಿಕೆಗಳು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ಪುಲ್ವಾಮಾ ದಾಳಿಗೆ ಐದು ವರ್ಷದ ಹಿನ್ನಲೆಯಲ್ಲಿ ಡಿಸಿ ಆವರಣದ ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಿ ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದ ಬೇರೆ ಬೇರೆ ಜಾಗದಲ್ಲಿ ಈ ಹಿಂದೆ ಬಾಂಬ್ ಸ್ಪೋಟ್ ಆಗುತ್ತಿದ್ದವು. ಈಗ ಅಂತಹ ಕೃತ್ಯಗಳ ಸುಳಿವಿಲ್ಲ. ಗಡಿಯಲ್ಲಿ ಅಂಗಡಿ ವ್ಯಾಪಾರಿಗೆ ಹೊಡೆದ ಘಟನೆ ಬಿಟ್ಟರೆ ಭಯೋತ್ಪಾದಕತೆ ಕಡಿಮೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಂಕ್ಪಲವೇ ಶೂನ್ಯ ಭಯೋತ್ಪಾದನೆ. ಇದನ್ನು ಅನುಸರಿಸಿದ ಪರಿಣಾಮ ಇವತ್ತು ದೇಶ ಸುರಕ್ಷಿತವಾಗಿದ್ದು, ಯಾವ ದೇಶ ಸುರಕ್ಷಿತ ಇರುತ್ತದೆಯೋ ಆ ದೇಶದ ಸಮೃದ್ದಿ ಹೊಂದಿ ನೆಮ್ಮದಿ ನೆಲೆಸುತ್ತದೆ ಎಂದರು.

ಮೊಯ್ಲಿ ಓದಿಕೊಳ್ಳಲಿ
ಬಿಜೆಪಿಯೇ ದೇಶ ಒಡೆದಿರುವ ಬಗ್ಗೆ ಆರೋಪ ಮಾಡುತ್ತಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರಿಗೆ ಇತಿಹಾಸದ ಅರಿವಿಲ್ಲ ಅಥವಾ ಈಗಿನ ಸೋಲಿನ ಹತಾಶೆಯಲ್ಲಿ ಹಾಗೇ ಹೇಳುತ್ತಿದ್ದಾರೆ ಅಷ್ಟೇ. ನಾಲ್ಕು ರಾಜ್ಯದಲ್ಲಿ ಅವರು ಸೋತರೂ ಎಲ್ಲ ಕಾರಣದಿಂದಾಗಿ ಅಪ್ರಬುದ್ಧರಾಗಿ ಮಾತನಾಡುತ್ತಿದ್ದಾರೆ. ಮೊಯ್ಲಿ ಅವರು ಪುಸ್ತಕ ಬರೆಯುವವರು, ಅವರು ಇದನ್ನು ಮಾತನಾಡಿದ್ದು ಆಶ್ಚರ್ಯವಾಗಿದೆ. ಹೀಗಾಗಿ ಅವರು ಇನ್ನಷ್ಟು ಚೆನ್ನಾಗಿ ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಇರಲೇ ಇಲ್ಲ ಎಂಬುದಾಗಿ ಅವರೇ ಹೇಳುತ್ತಾರೆ. ಆಗ ಇರಲಿಲ್ಲ ಅನ್ನುವವರು ದೇಶ ಒಡೆಯುವಾಗ ಹೇಳಿದ್ವಿ ಎಂದು ಹೇಳುತ್ತಾರೆ. ಹಿಂದೂ ಮಹಾಸಭಾ ಈ ವೇಳೆ ಪಾಕಿಸ್ತಾನ ಮಾಡುವುದಾದರೆ ಜನಸಂಖ್ಯೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಆಗಬೇಕು ಎಂದಿಷ್ಟು ನನಗೆ ಗೊತ್ತಿದೆ. ಅದು ಬಿಟ್ಟರೆ ಹಿಂದೂ ಮಹಾಸಭಾ ಕೂಡ ದೇಶ ವಿಭಜನೆಯ ಮಾತು ಹೇಳಿಲ್ಲ. ಇದು ಮೊಯ್ಲಿ ಅವರ ತಪ್ಪು ಕಲ್ಪನೆ ಎಂದು ಜೋಶಿ ಟಾಂಗ್ ಕೊಟ್ಟಿದ್ದಾರೆ.

Advertisement

ಯುಎಇಯಲ್ಲಿ ಹಿಂದೂ ಮಂದಿರ ನಿರ್ಮಾಣ ಆಗಿರುವುದು ಭಾರತದ ಸಂಸ್ಕೃತಿಯ ಪ್ರತಿಬಿಂಬವಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣ ವಿಚಾರ ಪ್ರಸ್ತಾಪಿದಾಗ ಅಲ್ಲಿನ ರಾಜ ಒಪ್ಪಿ ಜಾಗ ಕೊಟ್ಟಿದ್ದಲ್ಲದೇ ಹಿಂದು ದೇವರ ಆರಾಧನೆಗೆ ಅವಕಾಶ ಕೊಟ್ಟರು. ಇದು ಮೋದಿ ಅವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next