Advertisement

ಭಯೋತ್ಪಾದನೆ ವಿಶ್ವದ ಅತಿದೊಡ್ಡ ಸಮಸ್ಯೆ: ಬ್ರಿಕ್ಸ್ ಸಭೆಯಲ್ಲಿ ಪ್ರಧಾನಿ ಮೋದಿ

05:39 PM Nov 17, 2020 | keerthan |

ಹೊಸದಿಲ್ಲಿ: ಭಯೋತ್ಪಾದನೆಯು ಇಂದು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

Advertisement

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ಅವರು, ಭಯೋತ್ಪಾದನೆಯು ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲು. ಉಗ್ರ ಸಂಘಟನೆಗಳನ್ನು ಬೆಂಬಲಿಸುವ, ನೆರವು ಒದಗಿಸುವ ರಾಷ್ಟ್ರಗಳನ್ನು ಹೊಣೆಗಾರರನ್ನಾಗಿಸುವ ಅವಶ್ಯಕತೆ ಇದೆ. ಉಗ್ರರನ್ನು ನಾವು ಯಾವ ರೀತಿ ನೋಡುತ್ತೇವೆಯೋ ಅದೇ ರೀತಿ ಇಂತಹ ರಾಷ್ಟ್ರಗಳನ್ನು ನೋಡಬೇಕು. ಇದಕ್ಕೆ ಬ್ರಿಕ್ಸ್ ರಾಷ್ಟ್ರಗಳು ಒಂದಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತ ಬಹುಪಕ್ಷೀಯತೆಯ ಪ್ರಬಲ ಬೆಂಬಲಿಗ. ವಿಶ್ವಸಂಸ್ಥೆಯ ಮೌಲ್ಯಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಐಎಂಎಫ್, ಡಬ್ಲ್ಯುಟಿಒ ಮುಂತಾದ ಸಂಸ್ಥೆಗಳ ಸುಧಾರಣೆಗಳ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ವರ್ಚುವಲ್ ಶೃಂಗದಲ್ಲಿ ಬ್ರೆಜಿಲ್​, ರಷ್ಯಾ, ಚೀನಾ ಮತ್ತು ದಕ್ಷಿಣಾ ಆಫ್ರಿಕಾದ ನಾಯಕರು ಭಾಗಿಯಾಗಿದ್ದಾರೆ. ಈ ಬಾರಿಯ ಬ್ರಿಕ್ಸ್ ಶೃಂಗ ಸಭೆಯ ಆತಿಥ್ಯವನ್ನು ರಷ್ಯಾ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next