ಮುಂಬೈ: ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಟೆಂಡ್ ಜಾಗತಿಕ ಉಗ್ರ ದಾವೂದ್ ಇಬ್ರಾಹಿಂ ಹಾಗೂ ಆತನ ನಾಲ್ವರು ಸಹಚರರ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಆರೋಪ ಪಟ್ಟಿ ಸಲ್ಲಿಸಿದೆ.
ದಾವೂದ್ ಮತ್ತು ಆತನ ಸಹಚರರು ಜಾಗತಿಕ ಭಯೋತ್ಪಾದಕ ಜಾಲವನ್ನು ನಡೆಸುತ್ತಿ¨ªಾರೆ ಹಾಗೂ ಭಾರತದಲ್ಲಿ ವಿವಿಧ ಭಯೋತ್ಪಾದಕ ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಡಿ-ಕಂಪನಿ ಎಂಬ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ ಅನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಎಂ-ಕೋಕಾ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ 2002ರ ಫೆ.3ರಂದು ಎನ್‌ಐಎ ಎಫ್ಐಆರ್ ದಾಖಲಿಸಿತ್ತು.
ಈ ಪ್ರಕರಣದಲ್ಲಿ ಅರೀಫ್ ಶೇಕ್ ಅಲಿಯಾಸ್ ಅರೀಫ್ ಬಾಯಿಜಾನ್, ಶಬೀರ್ ಶೇಕ್ ಮತ್ತು ಮಹೊಮ್ಮದ್ ಸಲೀಂ ಕುರೇಷಿ ಅಲಿಯಾಸ್ ಸಲೀಂ ಬಂಧಿತರಾಗಿದ್ದಾರೆ. ದಾವೂದ್ ಇಬ್ರಾಹೀಂ ಕಸ್ಕರ್ ಮತ್ತು ಶಕೀಲ್ ಶೇಕ್ ಅಲಿಯಾಸ್ ಛೋಟಾ ಶಕೀಲ್ ವಾಟೆಂಡ್ ಆರೋಪಿಗಳಾಗಿದ್ದಾರೆ.