Advertisement

ಕಣಿವೆಗೆ ಪ್ರಾಂತ್ಯ ಮರುವಿಂಗಡಣಾ ಆಯೋಗ ಭೇಟಿ

08:42 PM Jul 01, 2021 | Nagendra Trasi |

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸದ್ಯದಲ್ಲೇ ಪ್ರಾಂತ್ಯಗಳ ಮರುವಿಂಗಡಣಾ ಕಾರ್ಯ ಆರಂಭವಾಗಲಿರುವ ಹಿನ್ನೆಲೆ ಯಲ್ಲಿ ನವದೆಹಲಿಯಲ್ಲಿರುವ ಪ್ರಾಂತ್ಯ ಮರುವಿಂಗಡಣಾ ಆಯೋಗದ ಸದಸ್ಯರು ಜು. 6ರಿಂದ 9ರವರೆಗೆ ಆ ರಾಜ್ಯಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಈ ವೇಳೆ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಜಕೀಯ ನಾಯಕರು, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಗಳನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆಯಲಿದ್ದಾರೆ. ಅವೆಲ್ಲವನ್ನೂ ಸಮೀಕ್ಷೆಯ ಪ್ರಾಥಮಿಕ ವರದಿಗಳ ರೂಪದಲ್ಲಿ ಪರಿಗಣಿಸಿ, ಹೊಸ ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ವಸತಿ ತೆರವಿಗೆ ಗಡುವು: ಕಣಿವೆ ರಾಜ್ಯದಲ್ಲಿ 149 ವರ್ಷ ಗಳಿಂದ ಜಾರಿಯಲ್ಲಿದ್ದ ದರ್ಬಾರ್‌ ಸ್ಥಳಾಂತರ ಪದ್ಧತಿಗೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ತಿಲಾಂ ಜಲಿ ನೀಡಿದ್ದಾರೆ. ಹಾಗಾಗಿ, ಇಲ್ಲಿನ ಎರಡು ರಾಜಧಾನಿಗಳಾದ ಜಮ್ಮು, ಶ್ರೀನಗರದಲ್ಲಿ ನೀಡಲಾಗಿರುವ ವಸತಿಗಳನ್ನು 3 ವಾರ ದಲ್ಲಿ ತೆರವುಗೊಳಿಸುವಂತೆ ಎಲ್ಲಾ ಸಚಿವಾಲಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜ್ಯದ ರಾಜಧಾನಿ 6 ತಿಂಗಳಿಗೊಮ್ಮೆ ಜಮ್ಮುವಿನಿಂದ ಶ್ರೀನಗರಕ್ಕೆ ಹಾಗೂ ಶ್ರೀನಗರದಿಂದ ಜಮ್ಮು ವಿಗೆ ಸ್ಥಳಾಂತರಗೊಳ್ಳುತ್ತಿತ್ತು. ಅಧಿಕಾರಿ ವರ್ಗವೂ 6 ತಿಂಗಳಿಗೊಮ್ಮೆ ಸ್ಥಳಾಂತರಗೊಳ್ಳುತ್ತಿತ್ತು. ಹಾಗಾಗಿ, ಎರಡೂ ಕಡೆ ಅಧಿಕಾರಿಗಳಿಗೆ ವಸತಿ ಸೌಕರ್ಯ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next