ಜಮ್ಮು: ಕಥುವಾ ಜಿಲ್ಲೆಯ ಹೀರಾನಗರ ಸೆಕ್ಟರ್‌ನಲ್ಲಿ 150 ಮೀ. ಉದ್ದದ ಸುರಂಗವನ್ನು ಬಿಎಸ್‌ಎಫ್ ಬುಧವಾರ ಪತ್ತೆ ಹಚ್ಚಿದೆ. ಆರು ತಿಂಗಳ ಅವಧಿಯಲ್ಲಿ ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಯೋಧರು ಪತ್ತೆ ಮಾಡಿರುವ ಮೂರನೇ ಸುರಂಗ ಇದಾಗಿದ್ದರೆ, ಒಂದು ದಶಕದ ಅವಧಿಯಲ್ಲಿ 9ನೆಯದ್ದಾಗಿದೆ. ಸುರಂಗದ ಮತ್ತೂಂದು ತುದಿ ಪಾಕ್ ಪ್ರಾಯೋಜಿತ ಉಗ್ರಗಾಮಿಗಳ ತರಬೇತಿ ಶಿಬಿರ ಶೇಖರಗಢ ಎಂಬ ಸ್ಥಳದಲ್ಲಿದೆ ಎಂದು ಬಿಎಸ್‌ಎಫ್ ಜಮ್ಮು ಫ್ರಾಂಟಿಯರ್‌ನ ಐ.ಜಿ. ಎನ್.ಎಸ್. ಜಮಾÌಲ್ ಹೇಳಿದ್ದಾರೆ.
ದಾಖಲೆಯ -7.8 ಡಿಗ್ರಿ ಸೆ. ತಾಪಮಾನ :
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈ ಬಾರಿ ಚಳಿ ವಿಪರೀತವಾಗಿದ್ದು, ಬುಧವಾರ ಶ್ರೀನಗರದಲ್ಲಿ 8 ವರ್ಷಗಳಲ್ಲಿಯೇ ಅತೀ ಕನಿಷ್ಠ -7.8 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿಂದೆ 2012ರ ಜ. 14ರಂದು ಇಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ವಾರ್ಷಿಕ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಆಗಿರುವ ಪಹಲ್ಗಾಂವ್‌ನಲ್ಲಿ ಬುಧವಾರ -11.7 ಡಿಗ್ರಿ ಸೆ. ತಾಪಮಾನವಿದ್ದು, ಮಂಗಳವಾರ ರಾತ್ರಿ -5.6 ಡಿಗ್ರಿ ಸೆ. ಉಷ್ಣಾಂಶವಿತ್ತು.