Advertisement

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

08:48 PM Mar 20, 2020 | Lakshmi GovindaRaj |

-ಇಷ್ಟು ದಿನ ಟೆರೇಸ್‌ ಕೇವಲ ಬಟ್ಟೆ ಒಣಗಿಸುವ ಜಾಗವಾಗಿತ್ತು. ಆದರೆ, ಹಿರಿಯರ ಪಾಲಿಗೆ ಈಗ ಟೆರೇಸ್‌ ಕೂಡ ಪುಟ್ಟ ಮೈದಾನ. ಇದನ್ನೇ ವಾಕಿಂಗ್‌ಗೆ ಆಯ್ದುಕೊಳ್ಳುವುದು ಉತ್ತಮ.

Advertisement

-ಮುಖ್ಯ ರಸ್ತೆಗಳಲ್ಲದೆ, ಬಡಾವಣೆಗಳ ಒಳಗಿನ ರಸ್ತೆಗಳಲ್ಲಿ ಈಗ ವಾಹನಗಳ ಓಡಾಟ ಮೊದಲಿನಂತಿಲ್ಲ. ರಸ್ತೆಗಳು ಖಾಲಿ ಇದ್ದರೆ, ಅಲ್ಲೂ ವಾಕಿಂಗ್‌ ಮಾಡಬಹುದು.

-ಮುಂಜಾನೆ ಮತ್ತು ಮುಸ್ಸಂಜೆ ಹೊತ್ತಿನಲ್ಲಿ, ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ, ತಿಂದ ಆಹಾರ ಜೀರ್ಣವಾಗುತ್ತದೆ. ನೀವು ಮಾಡುವ ವಾಕಿಂಗ್‌ನಿಂದ ದೇಹದಲ್ಲಿ ಇನ್ಸುಲಿನ್‌ ಹೆಚ್ಚು ಉತ್ಪಾದನೆಗೊಳ್ಳುತ್ತದೆ.

-ಹೊಟ್ಟೆ ತುಂಬಾ ಆಹಾರ ತಿನ್ನುವ ಅಭ್ಯಾಸ ವಿದ್ದರೆ, ಅದನ್ನು ಅಲ್ಪ ಪ್ರಮಾಣಕ್ಕೆ ಇಳಿಸುವುದು ಉತ್ತಮ. 3 ಹೊತ್ತು ತಿನ್ನುವಷ್ಟು ಆಹಾರವನ್ನು, 5 ಹೊತ್ತಿಗೆ ವಿಸ್ತರಿಸಿ, ಸ್ವಲ್ಪ ಸ್ವಲ್ಪವೇ ಸೇವಿಸಿ.

-ತಾರಸಿ ಮೇಲಿನ ಆಕಾಶದ ಸೌಂದರ್ಯವನ್ನು ನೋಡಿ, ಮನಸ್ಸು ಹಗುರ ಮಾಡಿಕೊಳ್ಳಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next