Advertisement

ಟರ್ಮ್ ಇನ್ಷೊರೆನ್ಸ್‌…

03:55 PM Feb 26, 2018 | Harsha Rao |

ವಿಮೆ ಮಾಡಿಸಬೇಕು ಅಂದರೆ ಎಲ್ಲರೂಟರ್ಮ್ ಇನ್ಷೊರೆನ್ಸ್‌ ಹಿಂದೆ ಬೀಳುತ್ತಾರೆ. ಇದನ್ನು ನೋಡಿಯೋ ಏನೋ ವಿಮಾ ಕಂಪೆನಿಗಳು ಕೂಡ ಸ್ಪರ್ಧೆಗೆ ಇಳಿದು ಬಿಟ್ಟಿವೆ. ಕಡಿಮೆ ದರದಲ್ಲಿ ಹೆಚ್ಚು ಪ್ರೀಮಿಯಂ ಅಂತ.

Advertisement

ಪ್ರೀಮಿಯಂ ಅನ್ನು ತುಲನಾತ್ಮಕವಾಗಿ ನೋಡಲು, ಹಣಕಾಸು ಸೇವೆ ನೀಡುವ ಸಾಕಷ್ಟು ಕಂಪನಿಗಳು ಹಾಗೂ ಮೊಬೈಲ… ಅಪ್ಲಿಕೇಷನ್‌ಗಳು, ಅತೀ ಕಡಿಮೆ ದರದ ಪ್ರೀಮಿಯಂ ತಿಳಿಸುತ್ತವೆ. ಹೀಗೆ ಕನಿಷ್ಠ ದರದಲ್ಲಿ ಗರಿಷ್ಠ ವಿಮಾ ರಕ್ಷಣೆ ನೀಡುವ ಜೀವ ವಿಮಾ ಕಂಪನಿಯ ಮೂಲಕ ಜನರಿಗೆ ಖರೀದಿಸಲು ಆಕರ್ಷಕವೆನಿಸುತ್ತದೆ.

– ಆದರೆ ಲಾಭಾಂಶದ ಜೊತೆಗೆ ವಿಮಾ ರಕ್ಷಣೆ ನೀಡುವ ಪಾಲಿಸಿಗಳಿಂದ ಪಡೆಯುವ ಸಾಕಷ್ಟು ಸವಲತ್ತುಗಳನ್ನು, ಟರ್ಮ್ ಇನ್ಷೊರೆನ್ಸ್‌ ಪಾಲಿಸಿಗಳು ನೀಡುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹಾಗೆಯೇ ಜೀವ ವಿಮೆಯು ದೀರ್ಘ‌ಕಾಲದ ಒಪ್ಪಂದವಾದ ಕಾರಣ ಲಾಭಾಂಶ ನೀಡುವ ಪಾಲಿಸಿಗಳನ್ನು ಪಡೆಯುವುದರಿಂದ ನಿರಂತರ ಉಳಿತಾಯದ ಜೊತೆಗೆ ವಿಮಾ ರಕ್ಷಣೆ ಸಿಗುತ್ತದೆ.  ಮೆಚೂÂರಿಟಿ ನಂತರ ವಿಮಾ ಮೊತ್ತ ಹಾಗೂ ಬೋನಸ್‌ನೊಂದಿಗೆ ಹಾಗೂ ಆದಾಯ ತೆರಿಗೆ ವಿನಾಯಿತಿಯೊಂದಿಗೆ ಉತ್ತಮ ಮೊತ್ತವು ಕೈಸೇರುವುದು. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯ ಅವಧಿಯಲ್ಲಿ ಮಾತ್ರ ವಿಮಾ ರಕ್ಷಣೆ ಇರುತ್ತದೆ. ಅವಧಿಯ ನಂತರ ಯಾವುದೇ ಮೊತ್ತ ಸಿಗುವುದಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಿಂದ ಹಣಕಾಸು ತೊಂದರೆ ಎನಿಸಿದಾಗ ಸಾಲ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಹಾಗೆಯೇ ಹಣಹಿಂದಿರುಗಿಸುವ (ಮನಿಬ್ಯಾಕ್‌) ಯೋಜನೆಗಳಲ್ಲಿ ನಿಯಮಿತ ಕಾಲಕ್ಕೆ ಹಣ ಪಡೆಯುವುದರ ಜೊತೆಗೆ ಪೂರ್ಣಪ್ರಮಾಣದ ವಿಮಾ ರಕ್ಷಣೆ ಮುಂದುವರೆಯುತ್ತದೆ. ಅಲ್ಲದೇ 3ವರ್ಷಕ್ಕೂ ಮೇಲ್ಪಟ್ಟು ಪ್ರೀಮಿಯಂ ಪಾವತಿಸಿದ್ದರೆ ಮುಂದೆ ತುಂಬಲು ಆಗದಿದ್ದರೆ ಸರಂಡರ್‌ ವ್ಯಾಲ್ಯೂ ದೊರೆಯುತ್ತದೆ. ಆದರೆ ಟರ್ಮ್… ಇನ್ಷೊರೆನ್ಸ… ಪಾಲಿಸಿಗಳಲ್ಲಿ ಈ ಸೌಲಭ್ಯವಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಲ್ಲಿ ಪ್ರೀಮಿಯಂ ಪಾವತಿಸುವ ವಿಧಾನ ಅಂದರೆ ವಾರ್ಷಿಕ, ಅರ್ಧವಾರ್ಷಿಕ ಅಥವಾ ತ್ತೈಮಾಸಿಕವಾಗಿ ಪಾವತಿಸುವ ಪ್ರಿಮಿಯಂಗಳಿಗೆ 30ದಿನಗಳ ಗ್ರೇಸ್‌ ಅವಧಿ ಇರುತ್ತದೆ. ಈ ಅವಧಿ ಮೀರಿಯೂ ತಾವು ಪ್ರಿಮಿಯಂ ಅಲ್ಪ ಬಡ್ಡಿಯೊಂದಿಗೆ ಪಾವತಿಸಲು ಅವಕಾಶವಿದೆ. ಆದರೆ ಟರ್ಮ್… ಇನ್ಷೊರೆನ್ಸ್‌ ಪಾಲಿಸಿಗಳಲ್ಲಿ ಗ್ರೇಸ್‌ ಅವಧಿ ಮುಗಿದ ನಂತರ ಮತ್ತೆ ಎÇÉಾ ವೈದ್ಯಕೀಯ ತಪಾಸಣೆ ಮಾಡಿಸಬೇಕಾಗುತ್ತದೆ. ಹಾಗಾಗಿ ಪಾಲಿಸಿಯನ್ನು ರಿವೈವಲ… ಮಾಡದೇ ಹಾಗೇ ಬಿಡುವವರೇ ಜಾಸ್ತಿ.

Advertisement

– ಲಾಭಾಂಶ ನೀಡುವ ಪಾಲಿಸಿಗಳು ಉಳಿತಾಯದ ವಿಧಾನವನ್ನು ನಿರಂತರವಾಗಿಸುತ್ತವೆ. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯಲ್ಲಿ ಉಳಿತಾಯದ ಉದ್ದೇಶವಿಲ್ಲ.

– ಅತೀ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಅತೀ ಹೆಚ್ಚು ವಿಮಾ ರಕ್ಷಣೆ ಕಡಿಮೆ ಪ್ರೀಮಿಯಂ ದರದಲ್ಲಿ ದೊರೆಯುತ್ತದೆ ಎಂದರೆ ಆ ಕಂಪನಿಯ ಲಾಭಾಂಶ ಅಥವಾ ಲೈಫ್ ಫ‌ಂಡ್‌ ಎಷ್ಟಿದೆ ಎಂದು ಗಮನಿಸಬೇಕಾಗುತ್ತದೆ.  ಯಾಕೆಂದರೆ ಬಹಳಷ್ಟು ಜನರಿಂದ ಹಣ ಸಂಗ್ರಹಿಸಿ ವಿಮಾ ರಕ್ಷಣೆಯಾದ ಡೆತ…-ಕ್ಲೇಮ… ನೀಡುವುದು ಕೆಲವೇ ಜನರಿಗೆ. ಹೀಗೆ ಸಂಗ್ರಹಿಸಿದ ಮೊತ್ತದ ಅತೀ ಹೆಚ್ಚು ಹಣವು ಬರೀ ಡೆತ್‌-ಕ್ಲೈಮ… ನೀಡಲು ವಿನಿಯೋಗವಾದಲ್ಲಿ ಆ ಕಂಪನಿಯ ಆರ್ಥಿಕ ಪರಿಸ್ಥಿತಿ ಏನಾಗಬಹುದೆಂದು ನೀವೇ ಊಹಿಸಿ. ಹೀಗೆ ಕಂಪನಿಯ ಹಣಕಾಸು ಪರಿಸ್ಥಿತಿ ಅಧೋಗತಿಗೆ ಬಂದಾಗ ಅಥವಾ ಲೈಫ‌… ಫ‌ಂಡ… ಗೆ ಹಾನಿಯಾದಾಗ, ಆ ಕಂಪನಿಯು ನೀಡಿದ ಭರವಸೆಯನ್ನು ಈಡೇರಿಸುವುದು ಕಷ್ಟ. ಇಲ್ಲದೇ ಇದ್ದರೆ ಡೆತ…-ಕ್ಲೇಮ… ಪಡೆಯುವ ಕುಟುಂಬದವರಿಗೆ ಏನೋ ಸಬೂಬು ಹೇಳಿ ಕ್ಲೇಮ… ಹಣ ನೀಡುವಲ್ಲಿ ನಿರಾಕರಿಸಬಹುದು. ಹಾಗಾಗಿ ನಾವು ವಿಮಾ ರಕ್ಷಣೆ ಪಡೆಯುವಾಗ ಕಡಿಮೆ ದರದ ಪ್ರಿಮಿಯಂನಲ್ಲಿ ದೊರೆಯುತ್ತದೆ ಎಂದು ವಿಮೆ ಮಾಡಿಸುವುದಕ್ಕಿಂತ,  ಆ ಕಂಪನಿಯ ಆರ್ಥಿಕ ಸದೃಢತೆ ಕಡೆಗೆ ಗಮನಹರಿಸಬೇಕು.  ಜೀವ ವಿಮೆಯನ್ನು ಪಡೆಯುವುದು ನಮ್ಮ ಆಪತ್ಕಾಲದಲ್ಲಿ ನಮ್ಮ ಕುಟುಂಬದವರಿಗೆ ಆರ್ಥಿಕ ಸಹಾಯ ಸುಲಭವಾಗಿ ದೊರೆಯಲೆಂದು. ಆದರೆ ಈ ಉದ್ದೇಶ ಈಡೆರದೇ ಇದ್ದಲ್ಲಿ ಎಷ್ಟೇ ದೊಡ್ಡ ವಿಮಾ ರಕ್ಷಣೆ ಪಡೆದರೂ ವ್ಯರ್ಥ. ಹಾಗಾಗಿ ಜೀವ ವಿಮೆ ಪಡೆಯುವಾಗ ಲಾಭಾಂಶ ನೀಡುವ ವಿಮಾ ಯೋಜನೆ ಪಡೆಯುವುದೋ ಅಥವಾ ಟರ್ಮ್… ಇನ್ಷೊರೆನ್ಸ್‌ ಪಡೆಯುವುದೋ ಎನ್ನುವುದುನಿ ‌ಮ್ಮ ವಿವೇಚನೆಗೆ ಬಿಟ್ಟದ್ದು.

– ಜೆ.ಸಿ.ಜಾಧವ.

Advertisement

Udayavani is now on Telegram. Click here to join our channel and stay updated with the latest news.

Next