ಸವದಿ ಹೇಳಿದರು.
Advertisement
ಪಟ್ಟಣದ ಜಿನಸೇನಾಚಾರ್ಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ, ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳ ತೇರದಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕನ್ನಡ ಬೋಧಕರಿಗೆ ಕ್ರಮವಾಗಿ ಕನ್ನಡ ಕಣ್ಮಣಿ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
Related Articles
Advertisement
ಮಾತೃಭಾಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸುವ ಪರಂಪರೆಗೆ ನಾಂದಿ ಹಾಡಿದ್ದು, ಮುಂದೆಯೂ ಇದೇ ಸಾಧನೆ ಮಕ್ಕಳಿಂದ ಮೂಡಿ ಬರಲೆಂದು ಆಶೀರ್ವಚನ ನೀಡಿದರು. ಬಿಇಒ ಅಶೋಕ ಬಸಣ್ಣವರ ಮಾತನಾಡಿ, ಕಳೆದ ವರ್ಷದ ಸಾಧನೆ ಮೆಚ್ಚುವಂತದ್ದಾಗಿದೆ. ಈ ಬಾರಿಯೂ 625ಕ್ಕೆ 625 ಅಂಕ ಪಡೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ಸಾಹದಿಂದ ಕಾರ್ಯ ನಿರ್ವಹಿಸಿದರೆ ಎಲ್ಲವೂ ಸಾಧ್ಯ ಎಂದರು. ಶಿಕ್ಷಣ ಸಂಯೋಜಕ, ಎಸ್‌ಎಸ್‌ಎಲ್‌ಸಿ ನೋಡಲ್ ಅ ಧಿಕಾರಿ ಶ್ರೀಶೈಲ ಬುರ್ಲಿ ಪ್ರಾಸ್ತಾವಿಕ ಮಾತುಗಳಾಡಿ, ಅವಿಭಜಿತ ಜಮಖಂಡಿ ತಾಲೂಕಲ್ಲಿ ಒಟ್ಟು 229 ಮಕ್ಕಳು ಗರಿಷ್ಠ ಅಂಕ ಪಡೆದುಕೊಂಡಿದ್ದರೆ, ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕಿನ 121 ಮಕ್ಕಳು ಗರಿಷ್ಠ ಸಾಧನೆ ಮೆರೆದಿದ್ದಾರೆ. ಒಟ್ಟು 31 ಶಾಲೆಗಳ 34 ಕನ್ನಡ ವಿಷಯ ಬೋಧಕರಿಗೆ ಗುರುಮಾತೆ ಡಾ| ಶಾರದಾ ಮುಳ್ಳೂರ ತಲಾ ಒಂದು ಸಾವಿರ ನಗದು ಬಹುಮಾನ ನೀಡಿ ಮುಂದಿನ ಬಾರಿಯೂ ಇನ್ನಷ್ಟು ಶೈಕ್ಷಣಿಕ ಸಾಧನೆ ಮೆರೆಯಲೆಂದು ಉತ್ತೇಜಿಸಿದ್ದಾರೆಂದರು.
ಜೆವ್ಹಿ ಮಂಡಳದ ಡಿ.ಆರ್. ಪಾಟೀಲ, ಡಾ| ಜೆ.ಬಿ. ಆಲಗೂರ, ಸುರೇಶ ಅಕಿವಾಟ, ಮಹಾವೀರ ಕೊಕಟನೂರ, ರಮೇಶ ಅವಟಿ, ಪ್ರವೀಣ ನಾಡಗೌಡ, ಎಂ.ಪಿ. ಅಸ್ಕಿ, ಪಿ.ಜಿ. ಹಟ್ಟಿ, ಪಿ.ಡಿ. ಬದನಿಕಾಯಿ, ಬಿ.ಎಸ್. ಕಡಕೋಳ, ಬಾಬಾಗೌಡ ಪಾಟೀಲ, ಎಸ್. ಎಂ. ಹರಗೆ, ಡಿ.ಬಿ. ಪಾಟೀಲ ಮುಂತಾದವರಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕ-ಸಾಹಿತಿ ಡಾ.ರೇವಣಸಿದ್ದಪ್ಪ ಗೌಡರ ಬರೆದ ಬ್ರಾಂಡೆಡ್ಆತ್ಮಗಳು, ಲೋಕಲ್ ಆತ್ಮಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಎಸ್.ಎನ್.ಹೆಬ್ಟಾಳೆ ಗುರುಮಾತೆ ಸ್ವಾಗತಿಸಿದರು. ಕೆ.ಎ. ಸಾವಂತನವರ ನಿರೂಪಿಸಿದರು. ಎಂ.ಬಿ.ಯಾತಗಿರಿ ವಂದಿಸಿದರು.