Advertisement

ಬೆಥನಿ ಮಾಟೆಕ್‌ಗೆ ಗಂಭೀರ ಗಾಯ

03:45 AM Jul 08, 2017 | Team Udayavani |

ಲಂಡನ್‌: ವಿಂಬಲ್ಡನ್‌ ಟೆನಿಸ್‌ ಕೂಟದ ಪಂದ್ಯದ ವೇಳೆ ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಗಾಯದಿಂದ ಅಂಗಣಕ್ಕೆ ಕುಸಿದ ಅವರು ನೋವು ತಡೆಯಲಾಗದೇ ಜೋರಾಗಿ ಕಿರುಚಿಕೊಂಡರು.

Advertisement

ರೊಮಾನಿಯಾದ ಸೋರಾನಾ ಸಿಸ್ಟಿìಯಾ ವಿರುದ್ಧ ನಿರ್ಣಾಯಕ ಸೆಟ್‌ನ ಮೊದಲ ಗೇಮ್‌ನಲ್ಲಿ 32ರ ಹರೆಯದ ಸ್ಯಾಂಡ್ಸ್‌ ಅವರು ನೆಟ್‌ ಕಡೆ ಆಗಮಿಸಿದ ವೇಳೆ ಬಲ ಮೊಣಕಾಲಿಗೆ ಗಂಭೀರ ಗಾಯವಾಗಿ ನೆಲಕ್ಕೆ ಕುಸಿದರು. “ಪ್ಲೀಸ್‌ ಹೆಲ್ಪ್ ಮಿ, ಪ್ಲೀಸ್‌, ಪ್ಲೀಸ್‌’ ಎಂದು ನೋವಿನಿಂದ ಕಿರುಚಿಗೊಂಡರು. ತತ್‌ಕ್ಷಣವೇ ಸ್ಯಾಂಡ್ಸ್‌ ಅವರ ಪತಿ ಜಸ್ಟಿನ್‌ ಅಂಗಣಕ್ಕೆ ಆಗಮಿಸಿ ಪತ್ನಿಯನ್ನು ಸಮಾಧಾನಪಡಿಸಿದರು. ವೈದ್ಯರು ಬಂದು ಪರೀಕ್ಷಿಸಿದರು. ಆಘಾತಗೊಂಡ ಸಿಸ್ಟಿìಯಾ ಅವರ ಕಣ್ಣಲ್ಲಿ ನೀರು ಬಂದಿತ್ತು.

ಸುಮಾರು 20 ನಿಮಿಷ ಅಂಗಣದಲ್ಲಿ ಮಲಗಿದ್ದ ಮಾಟೆಕ್‌ ಸ್ಯಾಂಡ್ಸ್‌ ಅವರನ್ನು ಆಬಳಿಕ ಸ್ಟ್ರೇಚರ್‌ನಲ್ಲಿ ಹೊರಗಡೆ ಕೊಂಡೊಯ್ಯಲಾಯಿತು. ಸ್ಯಾಂಡ್ಸ್‌ ಅವರ ಡಬಲ್ಸ್‌ ಜತೆಗಾರ್ತಿ ಲೂಸಿ ಸಫ‌ರೋವಾ ಕೂಡ ಸ್ಥಳಕ್ಕೆ ಆಗಮಿಸಿದರು. ಅವರ ಕಣ್ಣಲ್ಲಿ ಕೂಡ ನೀರು ಬಂದಿತ್ತು. ಅವರಿಬ್ಬರು ಜತೆಯಾಗಿ ನಾಲ್ಕು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಜಯಿಸಿದ್ದು ವಿಶ್ವದ ನಂಬರ್‌ ವನ್‌ ರ್‍ಯಾಂಕಿಂಗ್‌ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next