Advertisement
ಮಾರ್ಸೆಲಿ ಪ್ರಶಸ್ತಿ ಸಾಧನೆಯಿಂದ ರಾಂಕಿಂಗ್ನಲ್ಲಿ 4 ಸ್ಥಾನಗಳ ಪ್ರಗತಿ ಸಾಧಿಸಿದ ಸೋಂಗ 7ನೇ ಸ್ಥಾನಕ್ಕೆ ಲಗ್ಗೆ ಇರಿಸಿದರು. ಇದು ಕಳೆದ ಜೂನ್ ಬಳಿಕ ಸೋಂಗ ಕಂಡ ಅತ್ಯುತ್ತಮ ರಾಂಕಿಂಗ್ ಆಗಿದೆ. ಸೋಂಗ ಕೈಲಿ ಪರಾಜಯ ಅನು ಭವಿಸಿದ ಮಾರ್ಸೆಲ್ ಪೌಲಿ ಕೂಡ 2 ಸ್ಥಾನ ಮೇಲೇರಿ ರ್‍ಯಾಂಕಿಂಗ್ ಯಾದಿಯಲ್ಲಿ 15ನೇ ಸ್ಥಾನ ಪಡೆದಿದ್ದಾರೆ.
Related Articles
Advertisement
ವನಿತಾ ವಿಭಾಗದಲ್ಲಿ ದುಬಾೖ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಮೊದಲ ಬಾರಿಗೆ ಟಾಪ್-10 ಯಾದಿಯನ್ನು ಅಲಂಕರಿಸಿದ ಖುಷಿಯಲ್ಲಿದ್ದಾರೆ. 22ರ ಹರೆಯದ ಸ್ವಿಟೋಲಿನಾ 3 ಸ್ಥಾನ ಮೇಲೇರಿದ್ದು, ರಾಂಕಿಂಗ್ ಯಾದಿಯ 10ನೇ ಸ್ಥಾನದಲ್ಲಿದ್ದಾರೆ.
10ನೇ ಸ್ಥಾನದಲ್ಲಿದ್ದ ಬ್ರಿಟನ್ನಿನ ಜೊಹಾನ್ನಾ ಕೊಂಟಾ 11ಕ್ಕೆ ಇಳಿದರು. ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಒಂದು ಸ್ಥಾನ ಮೇಲೇರಿದ್ದು, 14ನೇ ರಾಂಕಿಂಗ್ ಹೊಂದಿದ್ದಾರೆ.
ಸೆರೆನಾ ವಿಲಿಯಮ್ಸ್ ರಾಂಕಿಂಗ್ ಯಾದಿಯ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದು, ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಸ್ಥಾನ ದಲ್ಲಿದ್ದಾರೆ. ದುಬಾೖ ಟೆನಿಸ್ ಪ್ರಶಸ್ತಿ ಜಯಿಸಿದ್ದೇ ಆದರೆ ಕೆರ್ಬರ್ ಮತ್ತೆ ನಂಬರ್ ವನ್ ಆಗಿ ಮೂಡಿ ಬರುತ್ತಿದ್ದರು. ಆದರೆ ಅವರು ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾಗೆ ಶರಣಾಗಿ ಈ ಅವಕಾಶ ಕಳೆದುಕೊಂಡರು.
ಟಾಪ್-10 ಆಟಗಾರ್ತಿಯರು 1. ಸೆರೆನಾ ವಿಲಿಯಮ್ಸ್ (7,780), 2. ಆ್ಯಂಜೆಲಿಕ್ ಕೆರ್ಬರ್ (7,405), 3. ಕ್ಯಾರೋಲಿನಾ ಪ್ಲಿಸ್ಕೋವಾ (5,640), 4.ಸಿಮೋನಾ ಹಾಲೆಪ್ (5,172), 5. ಡೊಮಿನಿಕಾ ಸಿಬುಲ್ಕೋವಾ (5,075), 6. ಅಗ್ನಿàಸ್ಕಾ ರಾದ್ವಂಸ್ಕಾ (4,670), 7. ಗಾರ್ಬಿನ್ ಮುಗುರುಜಾ (4,585), 8. ಸ್ವೆತ್ಲಾನಾ ಕುಜ್ನೆತ್ಸೋವಾ (3,915), 9. ಮ್ಯಾಡಿಸನ್ ಕೇಯ್ಸ (3,897), 10. ಎಲಿನಾ ಸ್ವಿಟೋಲಿನಾ (3,890).