Advertisement
ರವಿವಾರದ ಸಿಂಗಲ್ಸ್ ಫೈನಲ್‌ನಲ್ಲಿ ಸುಮಿತ್ ಇಟಲಿಯ ಲುಕಾ ನಾರ್ಡಿ ಅವರನ್ನು 6-1, 6-4 ಅಂತರದಿಂದ ಸುಲಭದಲ್ಲಿ ಮಣಿಸಿದರು. ಅವರು ಒಂದೂ ಸೆಟ್ ಕಳೆದುಕೊಳ್ಳದೆ ಜಯಿಸಿದ್ದು ವಿಶೇಷವಾಗಿತ್ತು. ಈ ಗೆಲುವಿನೊಂದಿಗೆ ಸುಮಿತ್ ರ್‍ಯಾಂಕಿಂಗ್ ಯಾದಿಯಲ್ಲಿ 98ನೇ ಸ್ಥಾನಕ್ಕೆ ಏರಿದರು.
ಬೆಂಗಳೂರು: ಸೋಮವಾರ ಆರಂಭವಾಗಲಿರುವ “ಬೆಂಗಳೂರು ಓಪನ್’ ಟೆನಿಸ್ ಪಂದ್ಯಾವಳಿಯ ಡ್ರಾ ಪ್ರಕಟಗೊಂಡಿದೆ. ಇದರಂತೆ ಭಾರತದ ಸ್ಟಾರ್ ಸಿಂಗಲ್ ಆಟಗಾರ ಸುಮಿತ್ ನಾಗಲ್ ಫ್ರಾನ್ಸ್‌ನ ಜೆಫ್ರಿ ಬ್ಲಾಂಕೆನಾಕ್ಸ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ರಾಮ್‌ಕುಮಾರ್ ರಾಮನಾಥನ್ ಫ್ರಾನ್ಸ್‌ನ ಮತ್ತೋರ್ವ ಆಟಗಾರ ಮ್ಯಾಕ್ಸಿಮ್ ಜಾನ್ವೀರ್ ವಿರುದ್ಧ ಆಡಲಿದ್ದಾರೆ.
Related Articles
Advertisement
1-1 ಸಮಬಲ ಸಾಧನೆಭಾರತದ ನಂ.1 ಆಟಗಾರನಾಗಿರುವ ರಾಮ್‌ಕುಮಾರ್ ರಾಮನಾಥನ್ ಮತ್ತು ಮ್ಯಾಕ್ಸಿಮ್ ಜಾನ್ವೀರ್ 2 ಸಲ ಮುಖಾಮುಖೀ ಆಗಿದ್ದು, 1-1 ಸಮಬಲದ ಸಾಧನೆ ದಾಖಲಿಸಿದ್ದಾರೆ. ರಾಮ್‌ಕುಮಾರ್ ಮೊದಲ ಸುತ್ತು ದಾಟಿದರೆ ಅಗ್ರ ಶ್ರೇಯಾಂಕದ ಇಟಲಿ ಟೆನಿಸಿಗ ಲುಕಾ ನಾರ್ಡಿ ಅವರನ್ನು ಎದುರಿಸುವ ಸಾಧ್ಯತೆ ಇದೆ. ಡಲ್ಲಾಸ್ ಓಪನ್ : ಅಮೆರಿಕನ್ನರ ಫೈನಲ್
ಡಲ್ಲಾಸ್, ಫೆ. 11: “ಡಲ್ಲಾಸ್ ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ಅಮೆರಿಕದ ಟೆನಿಸಿಗರೇ ಪ್ರಶಸ್ತಿ ಕಾಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಂದರೆ ಟಾಮಿ ಪೌಲ್ ಮತ್ತು ಮಾರ್ಕಸ್ ಗಿರೋನ್.
ದ್ವಿತೀಯ ಸೆಮಿಫೈನಲ್‌ನಲ್ಲಿ ಟಾಮಿ ಪೌಲ್ ಅಮೆರಿಕದವರೇ ಆದ ಬೆನ್ ಶೆಲ್ಟನ್ ಅವರನ್ನು 6-2, 6-4 ಅಂತರದಿಂದ ಪರಾಭವಗೊಳಿಸಿದರು. ಇದಕ್ಕೂ ಮೊದಲು ಮಾರ್ಕಸ್ ಗಿರೋನ್ ಫ್ರಾನ್ಸ್‌ನ ಅಡ್ರಿಯನ್ ಮನ್ನಾರಿನೊ ವಿರುದ್ಧ 6-1, 6-3ರಿಂದ ಗೆಲುವು ಸಾಧಿಸಿದ್ದರು.