Advertisement

Tennis ಮಾಂಟೆರಿ ಓಪನ್‌ : ನೊಸ್ಕೋವಾಗೆ ಮೊದಲ ಪ್ರಶಸ್ತಿ

12:58 AM Aug 26, 2024 | Team Udayavani |

ಮಾಂಟೆರಿ (ಮೆಕ್ಸಿಕೊ): ಮಾಂಟೆರಿ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಜೆಕ್‌ ಗಣರಾಜ್ಯದ 19 ವರ್ಷದ ಆಟಗಾರ್ತಿ ಲಿಂಡಾ ನೊಸ್ಕೋವಾ ಚಾಂಪಿಯನ್‌ ಆಗಿದ್ದಾರೆ. ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ನ‌ ಲುಲು ಸುನ್‌ ಅವರನ್ನು 7-6 (6), 6-4ರಿಂದ ಮಣಿಸಿದರು. ಒಂದು ವಾರದ ಹಿಂದಷ್ಟೇ ಸಿನ್ಸಿನಾಟಿ ಓಪನ್‌ನಲ್ಲಿ ಅನುಭವಿಸಿದ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರು.

Advertisement

ಇದು ಲಿಂಡಾ ನೊಸ್ಕೋವಾಗೆ ಒಲಿದ ಮೊದಲ ಡಬ್ಲ್ಯುಟಿಎ ಪ್ರಶಸ್ತಿ. ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ಲಿಂಡಾ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು. ಸೋಮವಾರ ಆರಂಭವಾಗುವ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ 30ನೇ ಶ್ರೇಯಾಂಕದ ಯುಲಿಯಾ ಪುಟಿನ್ಸೇವಾ ವಿರುದ್ಧ ಆಡಲಿದ್ದಾರೆ.

ಫೈನಲ್‌ ಸೋಲಿನಿಂದಾಗಿ ಲುಲು ಸುನ್‌ ಮೊದಲ ಟೆನಿಸ್‌ ಪ್ರಶಸ್ತಿಯಿಂದ ವಂಚಿತರಾದರು. ಇವರೂ ಯುಎಸ್‌ ಓಪನ್‌ನಲ್ಲಿ ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ಲೂಸಿಯಾ ಬ್ರೊನ್ಝೆಟ್ಟಿ ಅವರನ್ನು ಎದುರಿಸುವರು.

Advertisement

Udayavani is now on Telegram. Click here to join our channel and stay updated with the latest news.

Next