Advertisement

ಚುಟುಕಾಗುತ್ತೆ ಗ್ರ್ಯಾನ್‌ ಸ್ಲಾಂ ಟೆನಿಸ್‌ !

09:37 AM Dec 08, 2018 | Team Udayavani |

ಉಳಿದೆಲ್ಲ ಕ್ರೀಡೆಗಳಿಗೆ ಹೋಲಿಸಿದರೆ ಟೆನಿಸ್‌ನ ಸೊಬಗೇ ಬೇರೆ. ಅದು ಪಡೆಯುವ ತಿರುವುಗಳನ್ನು,
ಪರಿಣಾಮಗಳನ್ನು ಲೆಕ್ಕ ಹಾಕುವುದೇ ಕಷ್ಟ. ಯಾವುದೇ ಹಂತದಲ್ಲೂ ಪಂದ್ಯದ ಫ‌ಲಿತಾಂಶವೇ ಬದಲಾಗಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿರುವ ಕ್ರೀಡೆಯಿದು. 15, 30, 40 ಹಾಗೂ
ಡ್ನೂಸ್‌ ಎಂಬ ವಿಶಿಷ್ಟ ಸ್ಕೋರ್‌ ಲೈನ್‌ನ ಟೆನಿಸ್‌ನಲ್ಲಿ ಡ್ನೂಸ್‌, ಅಡ್ವಾಂಟೇಜ್‌ ನಂತರ ಮತ್ತೆ ಡ್ನೂಸ್‌ ಅರ್ಥಾತ್‌ 40-40ರ ಸ್ಥಿತಿಗೆ ಮರಳುವಿಕೆಯಿರುವುದರಿಂದ ಪಂದ್ಯದ ಕೊನೆ ಕ್ಷಣದವರೆಗೂ ಗೆಲುವು
ನಿಶ್ಚಿತ ಅಲ್ಲ. 1995ರ ವಿಂಬಲ್ಡನ್‌ನಲ್ಲಿ ಸ್ಟೆμಗ್ರಾಫ್ ಹಾಗೂ ಅರಾಕ್ಸಾ ಸ್ಯಾಂಚೆಜ್‌ ವಿಕಾರಿಯೋ ನಡುವಿನ ಫೈನಲ್‌ನ ಒಂದು ಗೇಮ್‌ 20 ನಿಮಿಷಗಳ ಕಾಲ ನಡೆದಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಆದರೆ ಕ್ಷಿಪ್ರವಾಗಿ ಫ‌ಲಿತಾಂಶಗಳನ್ನು ಒದಗಿಸಿ ವೇಳಾಪಟ್ಟಿಯಂತೆ ಸಾಗಬೇಕು ಎಂಬ ಇರಾದೆಯ ಟೆನಿಸ್‌ ಆಡಳಿತಗಳು ಇಂತಹ ಸಾಹಸಗಳ ಕತ್ತರಿ ಪ್ರಯೋಗಕ್ಕೆ ಮುಂದಾಗಿವೆ.

Advertisement

ನಿರ್ಣಾಯಕ ಟೈ ಬ್ರೇಕರ್‌!
ಈವರೆಗೆ ಟೆನಿಸ್‌ ಗ್ರ್ಯಾನ್‌ಸ್ಲಾಂಗಳಲ್ಲಿ ನಿರ್ಣಾಯಕ ಸೆಟ್‌ಗಳಿಗೆ ಟೈಬ್ರೇಕರ್‌ ಅಳವಡಿಸುತ್ತಿರಲಿಲ್ಲ. ಅಲ್ಲಿ ಫೈನಲ್‌ ಸೆಟ್‌ನ 12 ಗೇಮ್‌ಗಳಲ್ಲಿ ಯಾರೂ 7 ಗೇಮ್‌ ಗೆಲ್ಲದಿದ್ದರೆ ಆಟ ಹಾಗೆಯೇ ಮುಂದುವರಿಯುತ್ತಿತ್ತು.

ಯಾರು ಎದುರಾಳಿಗಿಂತ ಎರಡು ಗೇಮ್‌ ಮುನ್ನಡೆ ಪಡೆಯುತಿದ್ದರೋ ಅವರು ವಿಜೇತರಾಗುತ್ತಿದ್ದರು. 2010ರ ವಿಂಬಲ್ಡನ್‌ನಲ್ಲಿ ಜಾನ್‌ ಇಸ್ನರ್‌ ಎಂಬಾತ ನಿಕೋಲಸ್‌ ಮಾಹುಟ್‌ ಎದುರು ಗೆಲ್ಲಲು 11 ಗಂಟೆ ತೆಗೆದುಕೊಂಡರು. ಇದಕ್ಕೆ ಕಾರಣ ನಿರ್ಣಾಯಕ ಸೆಟ್‌ನಲ್ಲಿ ಯಾರೂ 2 ಅಂಕ ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. ಅಂದರೆ ಮುನ್ನಡೆ 7-6, 8-7 ಹೀಗೆ ಒಂದು ಅಂಕಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು. 5 ಸೆಟ್‌ಗಳ ಪಂದ್ಯದಲ್ಲಿ ಮೊದಲ ನಾಲ್ಕು ಸೆಟ್‌ 2-2ರಿಂದ ಸಮಗೊಂಡಿತ್ತು. ಮೊದಲ ನಾಲ್ಕು ಸೆಟ್‌ನ ಅಂಕ 6-4, 3-6, 6-7, 7-6. ಆದರೆ ನಿರ್ಣಾಯಕ ಸೆಟ್‌ ಮಾತ್ರ 70-68ರವರೆಗೆ ಮುಂದುವರಿಯಿತು. ಅಂತೂ ದೀರ್ಘ‌ಕಾಲ ಹೋರಾಡಿ ಇಸ್ನರ್‌ ಪಂದ್ಯ ಗೆದ್ದರು. ಅಷ್ಟೇಕೆ, ಇದೇ ವರ್ಷ ದಕ್ಷಿಣ ಆμÅಕಾದ ಕೆವಿನ್‌ ಆ್ಯಂಡರ್ಸನ್‌ ಆರೂವರೆ ಗಂಟೆಗಳ ಸೆಣಸಾಟದ ನಂತರ ಐದನೇ
ಸೆಟ್‌ ಅನ್ನು 26-24ರಲ್ಲಿ ಜಯಿಸಿದರು.

ಎದುರಾಳಿ ಇದೇ ಜಾನ್‌ ಇಸ್ನರ್‌!

Advertisement

ಈ ರೀತಿಯ ಪಂದ್ಯಗಳು ವೀಕ್ಷಕರಿಗೆ ಸೀಟ್‌ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದಾದರೂ ಸಂಘಟಕರಿಗೆ  ಇನ್ನೊಂದು ರೀತಿಯಲ್ಲಿ ಕುರ್ಚಿ ತುದಿಯಲ್ಲಿ ಕುಳಿತು ಚಡಪಡಿಸುವಂತಾಗುತ್ತದೆ. ಇಲ್ಲಿ ಪಂದ್ಯವೊಂದು ಮುಂದುವರೆದಾಗ ಇದೇ ಅಂಕಣದಲ್ಲಿ ಮುಂದಿನ ಪಂದ್ಯವನ್ನಾಡಲು ಲಾಕರ್‌ ರೂಂನಲ್ಲಿರುವ ಆಟಗಾರರು ಪರಿತಪಿಸುವಂತಾಗುತ್ತದೆ. ಪಂದ್ಯಗಳ ವೇಳಾಪಟ್ಟಿ ವ್ಯತ್ಯಯವಾಗುತ್ತದೆ. ಸೆಂಟರ್‌ಕೋರ್ಟ್‌ಗೆ ನಿಗದಿಯಾದ ಪಂದ್ಯವನ್ನು ಬೇರೆಡೆ ಆಡಿಸಿದರೆ ವೀಕ್ಷಕ ಕೂಡ ಪರಿಹಾರಕ್ಕೆ ನ್ಯಾಯಾಲಯಕ್ಕೆ ಹೋಗಬಹುದಾದ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಣಾಯಕ ಸೆಟ್‌ಗೂ ಟೈಬ್ರೇಕರ್‌ ಜಾರಿಗೆ ತರಲು ಸ್ಲಾಂ ನಿರ್ವಾಹಕರು ಚಿಂತಿಸುತ್ತಿದ್ದಾರೆ. ಜಾರಿಯಾಗುವ ಹಂತದಲ್ಲಿದೆ

ಹೊಸ ನಿಯಮ!
ಈಗಾಗಲೇ ವಿಂಬಲ್ಡನ್‌ನಲ್ಲಿ ಫೈನಲ್‌ ಸೆಟ್‌ಗೆ ಸೂಪರ್‌ ಟೈಬ್ರೇಕರ್‌ ನಿಯಮ ತರುವ ಬಗ್ಗೆ ಆಲ್‌ ಇಂಗ್ಲೆಂಡ್‌ ಕ್ಲಬ್‌ ಅಧಿಕಾರಿಗಳು ಪ್ರಕಟಿಸಿದ್ದಾರೆ. ಗ್ರ್ಯಾನ್‌ಸ್ಲಾಂನ ಆರಂಭದ ನಾಲ್ಕು ಸೆಟ್‌ಗಳಲ್ಲಿ ಜಯ ನಿರ್ಧಾರವಾಗದಿದ್ದಾಗ ಅಲ್ಲಿ ಟೈಬ್ರೇಕರ್‌ ಅಳವಡಿಸಲಾಗುತ್ತದೆ. 7 ಅಂಕ ತಲುಪಿದ ಕೂಡಲೇ ಟೈಬ್ರೇಕರ್‌ ಜಾರಿಯಾಗುತ್ತದೆ. ಅಂತಿಮ ಸೆಟ್‌ಗೆ ಮಾತ್ರ ಟೈಬ್ರೇಕರ್‌ ಇರಲಿಲ್ಲ. ಅಂತಿಮ ಸೆಟ್‌ ನಲ್ಲೂ ಟೈಬ್ರೇಕರ್‌ ಅಳವಡಿಸಲು ಹೊರಟಿದ್ದರೂ, ಅಲ್ಲಿ ಅಂಕಗಳು 12 ಆಗುವವರೆಗೆ ಕಾಯಲು ಚಿಂತಿಸಲಾಗಿದೆ. ಈ ಹಂತ ಬಂದಾಗ ಯಾರಿಗೂ ಎರಡು ಅಂಕ ಮುನ್ನಡೆ ಸಿಗದಿದ್ದರೆ ಆಗ ಟೈಬ್ರೇಕರ್‌ ಜಾರಿಯಾಗುತ್ತದೆ. ಜನವರಿಯಲ್ಲಿ ಮೆಲ್ಬರ್ನ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಕೂಡ 10 ಅಂಕಗಳ ನಂತರ ಟೈಬ್ರೇಕರನ್ನು ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಲಾಗಿದೆ. 2019ರ ಪ್ರಯೋಗದ ಫ‌ಲಿತಾಂಶ ಹಾಗೂ ಆಟಗಾರರ ಅಭಿಮತವನ್ನು ಪರಿಗಣಿಸಿ ಅದು ಮುಂದಿನ ವರ್ಷಗಳ ಬಗ್ಗೆ ತೀರ್ಮಾನ ಪ್ರಕಟಿಸಲಿದೆ. ಯುಎಸ್‌ ಓಪನ್‌ನಲ್ಲಿ ಈಗಾಗಲೇ ಫೈನಲ್‌ ಸೆಟ್‌ಗೆ ಟೈಬ್ರೇಕರ್‌ ಅಳವಡಿಕೆಯಾಗಿದೆ. ಫ್ರೆಂಚ್‌ ಓಪನ್‌ನಲ್ಲಿ ಮಾತ್ರ ಎಂದಿನ ನಿಯಮವೇ ಮುಂದುವರಿದುಕೊಂಡು ಹೋಗುತ್ತಲಿದೆ.

ಮಹಿಳಾ ಟೆನಿಸ್‌ಗೆ ಹೊಂದುತ್ತಾ?
ಆಟಗಾರರ ದೃಷ್ಟಿಯಿಂದ ನೋಡಿದರೆ, ಪುರುಷರ ವಿಭಾಗದ ಬಹುಪಾಲು ಆಟಗಾರರು ಈ ನಿಯಮವನ್ನು ಸ್ವಾಗತಿಸಬಹುದು. ಪಂದ್ಯಗಳಲ್ಲಿ ರ್ಯಾಲಿ ವಿಸ್ತರಿಸಿದಷ್ಟೂ ಚೆನ್ನಾಗಿ ಆಡುವವನಿಗಿಂತ ಅತ್ಯುತ್ತಮ ಫಿಟ್‌ನೆಸ್‌ ಹೊಂದಿದವ ವಿಜೇತನಾಗಿಬಿಡುತ್ತಾನೆ! ಆದರೆ ಮಹಿಳಾ ಟೆನಿಸ್‌ ಕೇವಲ ಮೂರು ಸೆಟ್‌ಗಳ ಪಂದ್ಯ. ಇಲ್ಲಿ ಕೊನೆಯ ಸೆಟ್‌ಗೆ ಟೈಬ್ರೇಕರ್‌ ಅಳವಡಿಕೆ ಸೂಕ್ತವಾಗುತ್ತದೆಯೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಆಟ ಚುಟುಕಾಗಿ ಮುಕ್ತಾಯವಾಗುವುದರಿಂದ ಇದಕ್ಕೆ ಟೈಬ್ರೇಕರ್‌ ಬೇರೆ ಬೇಕೆ? ಅಂತಿಮ ಸೆಟ್‌ ಸ್ವಲ್ಪ ಎಳೆದಾಡಿದರೂ ಪರವಾಗಿಲ್ಲ ಎನ್ನುವುದು ಅಭಿಪ್ರಾಯ. ಇದಕ್ಕೆ ಕಾಲವೇ ಉತ್ತರ ಹೇಳಬೇಕು. 

Advertisement

Udayavani is now on Telegram. Click here to join our channel and stay updated with the latest news.

Next