ಬಜಪೆ: ಬಜಪೆ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ಅವರ ತಂಡ ಮಾ. 18ರಂದು ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ 2 ದನಗಳ ಸಹಿತ ಬಜಪೆ ಭಟ್ರಕೆರೆಯ ನಿವಾಸಿ ಮೊಹಮ್ಮದ್ ಸೈಪುದ್ದೀನ್ (19) ಮತ್ತು ಬಜಪೆ ಪೊರ್ಕೋಡಿಯ ನಿವಾಸಿ ಅಬ್ದುಲ್ ರಜಾಕ್ ಯಾನೆ ಫಾಜಿಲ್ (19) ರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ ಈ ಪತ್ತೆ ಕಾರ್ಯ ನಡೆಸಲಾಗಿತ್ತು.
ಈ ಮೊದಲು ಇಲ್ಲಿನ ತೆಂಕ ಎಕ್ಕಾರು ಎಂಬಲ್ಲಿ ಮೇಯಲು ಕಟ್ಟಿ ಹಾಕಿದ್ದ 2 ದನಗಳನ್ನು ಮಾ. 17ರಂದು ಬೆಳಗ್ಗೆ 8ಕ್ಕೆ ಕಳವು ಮಾಡಿರುವ ಬಗ್ಗೆ ಬಜಪೆ ಠಾಣೆಯಲ್ಲಿ ದನದ ಮಾಲಕರು ದೂರು ನೀಡಿದ್ದರು. ಈ ದೂರಿನಂತೆ ಕಳವಾಗಿರುವ ದನ ಮತ್ತು ಆರೋಪಿಗಳ ಪತ್ತೆಗೆ ಪೊಲೀಸರು ತಂಡವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.