Advertisement

Hebri ಅಪರಿಚಿತರಿಂದ ದನ ಕಳವು

12:48 AM Jul 26, 2024 | Team Udayavani |

ಹೆಬ್ರಿ: 41ನೇ ಶಿರೂರು ಗ್ರಾಮದ ಬಂಡಸಾಲೆ ದೇವಿ ಅನ್ನಪೂರ್ಣೇಶ್ವರಿ ಎಂಜಿನಿಯರಿಂಗ್‌ ವರ್ಕ್ಸ್ ಕಚೇರಿ ಬಳಿಯಲ್ಲಿ ಹಸುಗಳನ್ನು ಅಪರಿಚಿತರು ಕಳ್ಳತನ ಮಾಡಿದ ಘಟನೆ ನಡೆದಿದೆ.

Advertisement

ಮುಸುಕು ಹಾಕಿಕೊಂಡು ಬಂದ ಇಬ್ಬರು ವ್ಯಕ್ತಿಗಳು ಸುಮಾರು 10,000 ರೂ. ಮೌಲ್ಯದ ದನವನ್ನು ಹಿಡಿದು ಹಿಂಸಾತ್ಮಕವಾಗಿ ಬೊಲೆರೋ ವಾಹನದಲ್ಲಿ ತುಂಬಿಸಿ ಕಳವುಗೈದು ಪರಾರಿಯಾಗಿದ್ದಾರೆ.

ವರ್ಕ್‌ ಶಾಪ್‌ನ ಸಿಸಿ ಕೆಮರಾದಲ್ಲಿ ಕೃತ್ಯ ಸೆರೆಯಾಗಿದೆ. ರಾತ್ರಿ ಸಮಯ ಆಗಿದ್ದರಿಂದ ವಾಹನದ ನೋಂದಣಿ ಸಂಖ್ಯೆ ಗುರುತಿಸಲು ಅಸಾಧ್ಯವಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next