ದಾವಣಗೆರೆ: ಕಾಂಗ್ರೆಸ್ ಮುಖಂಡರು ರಾಜ್ಯ ಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ ಮನವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಶುಕ್ರವಾರ ಮಾಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗುತ್ರಿಗೆದಾರರಿಗೆ ಯಾವ ಅವಧಿಯಲ್ಲಿ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಬರೆದಿಲ್ಲ ಎಂದರು.
ಕಾಂಗ್ರೆಸ್ ನವರೇ ಪರ್ಸೆಂಟೇಜ್ ಜನಕರು,ಕಾಮಗಾರಿ ಟೆಂಡರ್ ಗಳಲ್ಲಿ ಪರ್ಸೆಂಟ್ ಜಾಸ್ತಿಯಾಗಿದ್ದರೆ ಅದು ಕಾಂಗ್ರೆಸ್ ಕಾಲದಲ್ಲಿ. ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗು ಗೊತ್ತಿದೆ. ಪರ್ಸೆಂಟ್ ಜಾಸ್ತಿಯಾಗಿದ್ದು ಕಾಂಗ್ರೆಸ್ ಅಧಿಕಾರವಧಿಯಲ್ಲಿ ಎಂದು ದೂರಿದರು.
ರಾಜ್ಯಪಾಲರಿಗೆ ಕೊಟ್ಟಿರುವ ಪತ್ರದಲ್ಲಿ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿದೆ ಆಗಿದೆ ಎಂಬ ಮಾಹಿತಿಯೂ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿನ ಟೆಂಡರ್ ಗಳನ್ನು ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಎಸಿಬಿ ಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇದರಿಂದ ಭ್ರಷ್ಟರ ಬಂಡವಾಳ ಬಯಲಾಗಿದೆ. ವ್ಯವಸ್ಥೆ ಶುದ್ಧೀಕರಣ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ .ಹಾಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಎಂಟು ಸಾವಿರ ಎಕರೆಯಲ್ಲಿ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪರಿಹಾರ ಆ್ಯಪ್ ಗೆ ಹಾನಿಯ ಮಾಹಿತಿ ಅಪ್ ಲೋಡ್ ಆಗುತ್ತಿದ್ದಂತೆ ಸಂಬಂಧಿತ ರೈತರಿಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಮಳೆಯಿಂದ ನಷ್ಟಕ್ಕೀಡಾಗಿರುವ ಪ್ರತಿಯೊಬ್ಬ ರೈತರಿಗೆ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು.