Advertisement
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ತಿಷಯ ತಿಳಿಸಿದ ಅವರು, ನಗರದಲ್ಲಿ ಈಗಾಗಲೇ ತಾಜ್‌ಬಾವಡಿ, ಇಬ್ರಾಹಿಂಪುರ ಬಾವಡಿ ಪುನಶ್ಚೇತನ ಆರಂಭಗೊಳಿಸಿ ಕುಡಿಯುವ ಬಳಕೆಗಾಗಿ ಜಲ ಶುದ್ಧೀಕರಣ ಘಟಕಗಳನ್ನೂ ಅಳವಡಿಸಲಾಗಿದೆ. ಈ ಯಶಸ್ಸಿನ ನಂತರ ನಾನು ಸಚಿವನಾಗಿದ್ದ ಜಲ ಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯ 10 ಬಾವಡಿಗಳ ಪುನಶ್ಚೇತನಕ್ಕೆ ಮುಂದಾಗಿದ್ದು ಈಗಟೆಂಡರ್ ಕರೆಯಲಾಗುತ್ತಿದೆ ಎಂದರು.
ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದರು. ಇದಲ್ಲದೇ ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿರುವ ದೇವರಹಿಪ್ಪರಗಿ ಪಾತರಗಿತ್ತಿ ಬಾವಡಿ 32 ಲಕ್ಷ ರೂ., ಆಲಮೇಲದ ಅಕ್ಕ ತಂಗಿಯರ ಬಾವಡಿ, 61 ಲಕ್ಷ ರೂ. ಮನಗೂಳಿ ಗ್ರಾಮದಲ್ಲಿರುವ ಬಾವಡಿ 42 ಲಕ್ಷ ರೂ., ಬಸವನಬಾಗೇವಾಡಿಯ ಬಸವರ್ಣಣ ಬಾವಿ 45 ಲಕ್ಷ ರೂ. ಹಾಗೂ ಮುತ್ತಗಿ ಗ್ರಾಮದಲ್ಲಿರುವ ಬಾವಡಿ 65 ಲಕ್ಷ ರೂ. ಸೇರಿದಂತೆ ಈ ಎಲ್ಲ 10 ಬಾವಡಿಗಳ ಪುನಶ್ಚೇತನಕ್ಕೆ 5.57 ಕೋಟಿ ರೂ. ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಬಾವಡಿಗಳ ನೀರು ಸದ್ಬಳಕೆ ಮಾಡಿಕೊಳ್ಳಲು ಶುದ್ಧೀಕರಣ ಘಟಕಗಳನ್ನೂ ಅಳವಡಿಸಲಾಗುತ್ತಿದೆ. ಬರುವ ವರ್ಷ ಜಿಲ್ಲೆಯ ಇನ್ನೂ 10 ಬಾವಡಿಗಳ ಪುನಶ್ಚೇತನ ಕಾರ್ಯಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
Related Articles
Advertisement
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಂಗಾರು ಕ್ಷೀಣಿಸಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಆಲಮಟ್ಟಿಯ ಶಾಸ್ತ್ರಿ ಜಲಾಶಯ ಸೇರಿದಂತೆ ಎಲ್ಲ ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ನಾಲೆಗಳಿಗೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಜಲಾಶಯಗಳ ನೀರು ಬಿಡುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಜಲಾಶಯದ ನೀರು ನಿರ್ವಹಣಾ ಮಂಡಳಿ ಅಧ್ಯಕ್ಷರಾಗಿರುವ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ, ಸಚಿವ ಎಂ.ಸಿ. ಮನಗೂಳಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ವಿವರಿಸಿದರು.