Advertisement

337 ರಸ್ತೆ ವಾರ್ಷಿಕ ನಿರ್ವಹಣೆಗೆ ಟೆಂಡರ್‌ : ರಸ್ತೆಗಳ ಸ್ವಚ್ಛತೆಗೆ ಆದ್ಯತೆ

12:16 PM Jan 20, 2021 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅತಿಮುಖ್ಯ ರಸ್ತೆ ಹಾಗೂ ಮುಖ್ಯ ರಸ್ತೆಗಳು ಸೇರಿ ಒಟ್ಟು 800 ಕಿ.ಮೀ ಉದ್ದದ 337
ರಸ್ತೆಗಳನ್ನು ನಿರ್ದಿಷ್ಟ ಸಂಸ್ಥೆಗೆ ಒಂದು ವರ್ಷ ನಿರ್ವಹಣೆಗೆ ನೀಡಲು ಪಾಲಿಕೆ ಮುಂದಾಗಿದೆ.

Advertisement

ಸರ್ಕಾರದ “ಬೆಂಗಳೂರು ಮಿಷನ್‌ -2022’ನ ಭಾಗ ವಾಗಿ ಆರ್ಟೀರಿಯಲ್‌ (ಅತೀ ಮುಖ್ಯ)ರಸ್ತೆ ಹಾಗೂ ಸಬ್‌ ಆರ್ಟೀರಿಯಲ್‌ (ಮುಖ್ಯ)ರಸ್ತೆಗಳ ನಿರ್ವಹಣೆಗೆ 13 ಪ್ಯಾಕೇಜ್‌ಗಳನ್ನು ಮಾಡಲಾಗಿದ್ದು, ಈ ಯೋಜನೆಗಾಗಿ ಅಂದಾಜು 10 ಕೋಟಿ ರೂ. ಮೀಸಲಿಡಲಾಗಿದೆ.

ಇದರಿಂದ ಮುಂದಿನ ದಿನಗಳಲ್ಲಿ ಮೇಲ್ಸೇತುವೆ ಭಾಗ ಹಾಗೂ ಅಂಡರ್‌ ಪಾಸ್‌ಗಳ ಕೆಳಗಿರುವ ರಸ್ತೆಗಳ ನಿರ್ವಹಣೆ ಹಾದಿ ಸುಗಮವಾಗಲಿದೆ. ನಗರದಲ್ಲಿ ಅತೀ ಮುಖ್ಯ ರಸ್ತೆ ಹಾಗೂ ಮುಖ್ಯರಸ್ತೆ ಸೇರಿ ಒಟ್ಟು 1,323 ಕಿ.ಮೀ ಉದ್ದವಿದ್ದು, 467 ಪ್ರಮುಖ
ರಸ್ತೆಗಳಿವೆ.

ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಟಾಳ ರಸ್ತೆ ಹಾಗೂ ಔಟರ್‌ರಿಂಗ್‌ ರೋಡ್‌ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಗರದ
ಶೇ.70ರಷ್ಟು ವಾಹನ ಸಂಚಾರ ಇರುತ್ತದೆ.

ಇದನ್ನೂ ಓದಿ:ರಾಜಭವನ ಚಲೋ ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನೆ

Advertisement

ಹೀಗಾಗಿ, ಈ ರಸ್ತೆಗಳಲ್ಲಿ ಧೂಳು ಇಲ್ಲದಂತೆ ಹಾಗೂ ವಾಹನ ಸಂಚಾರ ಅಧಿಕವಾಗಿರುವುದರಿಂದ ಪಾದಚಾರಿ ಮಾರ್ಗ ಸುಧಾರಣೆಯ ಅವಶ್ಯಕತೆಯೂ ಇದೆ. ಅಲ್ಲದೆ, ಮಳೆಗಾಲದಲ್ಲಿ ಮಳೆ ನೀರು ನಿಲ್ಲದಂತೆ ಸದಾ ಕಣ್ಗಾವಲು ಇರಿಸಬೇಕಾಗಿದ್ದು, ಈಗ ಪಾಲಿಕೆ ವೆಚ್ಚ ಮಾಡುತ್ತಿರುವ ಮೊತ್ತದ ಹಣದಷ್ಟೇ ಟೆಂಡರ್‌ ಕರೆಯಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಸತಿ
ಸಮುಚ್ಚಯ ಅಥವಾ ಖಾಸಗಿ ಸಂಸ್ಥೆಗಳ ನಿರ್ವಹಣಾ ಮಾದರಿಯಲ್ಲೇ ಪಾಲಿಕೆ ಪ್ಲಾನ್‌ ಮಾಡಿದೆ.

ಟೆಂಡರ್‌ಪಡೆದದರಿಗೆ ನಿಗದಿ ಮಾಡಿರುವ ರಸ್ತೆ ಮಾರ್ಗದಲ್ಲಿ ಕಟ್ಟಡ ಅವಶೇಷಗಳು, ಕಸ ಹಾಗೂ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯದಂತೆ ಕಣ್ಗಾವಲು ಇರಿಸಬೇಕು ಎಂಬ ಷರತ್ತು ವಿಧಿಸಲಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರಸ್ತೆಗಳು
ಸ್ವತ್ಛವಾಗಿರುವ ನಿರೀಕ್ಷೆ ಮೂಡಿದೆ.

ಅಲ್ಲದೆ, ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯ ತೆಗೆಯಬೇಕು ಹಾಗೂ ಆಗ್ಗಿಂದಾಗೇ ಎಲ್ಲ ರೀತಿಯ ತ್ಯಾಜ್ಯಗಳನ್ನು
ರಸ್ತೆ ಮೇಲಿಂದ ತೆರವುಗೊಳಿಸಬೇಕು. ಮಳೆಗಾಲದಲ್ಲಿ ಕತ್ತರಿಸಿರುವ ಮರದ ರಂಬೆ- ಕೊಂಬೆ ಸಾಗಾಣಿಕೆ ಮಾಡಬೇಕಿರುವ ಜವಾಬ್ದಾರಿಯನ್ನೂ ನೀಡಲಾಗಿದೆ ಎಂದು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

– ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next