Advertisement
ತಂಡಗಳುರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿಯಂತಹ ಮಹಾನ್ ತಾರೆಯನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಆ ಬರವನ್ನು ನೀಗಿಸಿಕೊಳ್ಳುವ ಉದ್ದೇಶ ಹೊಂದಿದೆ.
ಶಕ್ತಿ: ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಲಯ ಹೊಂದಿದ್ದಾರೆ. ನಾಯಕ ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
ದೌರ್ಬಲ್ಯ: ಆರ್‌ಸಿಬಿ ಬೌಲಿಂಗ್‌ನಲ್ಲಿ ಬಹಳ ಕಳಪೆ ದಾಖಲೆ ಹೊಂದಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ದುರ್ಬಲ.
ಮುಖ್ಯ ಆಟಗಾರರು: ಕೊಹ್ಲಿ, ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್
ರೋಹಿತ್ ಶರ್ಮ ನಾಯಕತ್ವದಲ್ಲಿ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಮುಂಬೈ ಅತ್ಯಂತ ಬಲಿಷ್ಠ ತಂಡ. ಈ ಬಾರಿಯೂ ಅದನ್ನು ಮುಂದುವರಿಸುವ ಉತ್ಸಾಹ ಹೊಂದಿದೆ.
ಶಕ್ತಿ: ರೋಹಿತ್, ಸೂರ್ಯಕುಮಾರ್, ಕಿಶನ್‌ರನ್ನೊಳಗೊಂಡಂತೆ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್.
ದೌರ್ಬಲ್ಯ: ವೇಗಿ ಬುಮ್ರಾ ಈ ಬಾರಿ ಆಡುತ್ತಿಲ್ಲ. ಹಾಗಾಗಿ ಜೋಫ್ರಾ ಆರ್ಚರ್ ಒಬ್ಬರೇ ನಂಬಿಗಸ್ಥ ಬೌಲರ್.
ಮುಖ್ಯ ಆಟಗಾರರು: ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್. ಚೆನ್ನೈ ಸೂಪರ್ ಕಿಂಗ್ಸ್
ಬೆನ್ ಸ್ಟೋಕ್ಸ್‌ರನ್ನು ಚೆನ್ನೈ ಕಿಂಗ್ಸ್ 16 ಕೋಟಿ ರೂ. ನೀಡಿ ಖರೀದಿಸಿದೆ. ಅಲ್ಲಿಗೆ ಧೋನಿ ನಂತರ ತಂಡದ ಚುಕ್ಕಾಣಿ ಅವರೇ ಹಿಡಿಯಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ತಂಡ 4 ಬಾರಿ ಪ್ರಶಸ್ತಿ ಗೆದ್ದಿದೆ.
ಶಕ್ತಿ: ಎಂ.ಎಸ್.ಧೋನಿಯ ನಾಯಕತ್ವ, ಹಾಗೆಯೇ ತಂಡದಲ್ಲಿರುವ ಅತ್ಯಂತ ಅನುಭವ ಆಟಗಾರರು.
ದೌರ್ಬಲ್ಯ: ತಂಡದ ವೇಗದ ಬೌಲಿಂಗ್ ವಿಭಾಗ ದುರ್ಬಲ. ಗಾಯದಿಂದ ಸುಧಾರಿಸಿಕೊಂಡಿರುವ ದೀಪಕ್ ಚಹರ್‌ರನ್ನು ಅವಲಂಬಿಸುವುದು ಅಸಾಧ್ಯ.
ಮುಖ್ಯ ಆಟಗಾರರು: ಎಂ.ಎಸ್.ಧೋನಿ, ಬೆನ್ ಸ್ಟೋಕ್ಸ್, ರವೀಂದ್ರ ಜಡೇಜ
Related Articles
ಎರಡು ಬಾರಿ ಚಾಂಪಿಯನ್ ಆಗಿರುವ ಕೋಲ್ಕತ ನೈಟ್ ರೈಡರ್ಸ್ ತಂಡ ಈ ಬಾರಿ ಶ್ರೇಯಸ್ ಐಯ್ಯರ್ ಗೈರಿನಿಂದ ದುರ್ಬಲವಾಗಿ ಗೋಚರಿಸುತ್ತಿದೆ.ಶಕ್ತಿ: ಆಲ್‌ರೌಂಡರ್‌ಗಳೇ ಈ ತಂಡದ ಶಕ್ತಿ: ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನೀಲ್ ನಾರಾಯಣ್, ಶಕಿಬ್ ಹಸನ್ ಎರಡೂ ವಿಭಾಗಗಳಲ್ಲಿ ನೆರವಾಗುತ್ತಾರೆ.
ದೌರ್ಬಲ್ಯ: ಆರಂಭಿಕ ಬ್ಯಾಟಿಂಗ್ ಕ್ರಮಾಂಕ ಅಸ್ಥಿರವಾಗಿದೆ. ಸ್ಥಿರವಾಗಿ ಆಡಬಲ್ಲ ಬ್ಯಾಟರ್‌ಗಳ ಕೊರತೆಯಿದೆ.
ಮುಖ್ಯ ಆಟಗಾರರು: ನಿತೀಶ್ ರಾಣಾ, ಶಾರ್ದೂಲ್ ಠಾಕೂರ್, ಆಂಡ್ರೆ ರಸೆಲ್.
Advertisement
ಸನ್‌ರೈಸರ್ಸ್ ಹೈದ್ರಾಬಾದ್ಒಂದು ಬಾರಿಯ ಚಾಂಪಿಯನ್ ಆಗಿರುವ ಹೈದ್ರಾಬಾದ್ ತಂಡ ಬಲಿಷ್ಠವಾಗಿದೆ. ಲಯದಲ್ಲಿರುವ ವಿದೇಶಿ ಆಟಗಾರರಿಂದ ತುಂಬಿಕೊಂಡಿದೆ.
ಶಕ್ತಿ: ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್‌ರನ್ನು ಹೊಂದಿರುವ ಅತ್ಯುತ್ತಮ ಬೌಲಿಂಗ್ ವಿಭಾಗ.
ದೌರ್ಬಲ್ಯ: ಈ ತಂಡ ಬ್ಯಾಟಿಂಗ್ ಅಸ್ಥಿರವಾಗಿದೆ. ದೇಶೀಯ ಆಟಗಾರರು ಗಮನ ಸೆಳೆದಿಲ್ಲ.
ಮುಖ್ಯ ಆಟಗಾರರು: ಐಡೆನ್ ಮಾರ್ಕ್ರಮ್, ಹ್ಯಾರಿ ಬ್ರೂಕ್, ಉಮ್ರಾನ್ ಮಲಿಕ್ ರಾಜಸ್ಥಾನ್ ರಾಯಲ್ಸ್
ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್, 2022ರಲ್ಲಿ ಇನ್ನೊಮ್ಮೆ ಫೈನಲ್‌ಗೇರಿತ್ತು. ಈ ಬಾರಿ ನವೋತ್ಸಾಹದಲ್ಲಿದೆ.
ಶಕ್ತಿ: ಅನುಭವಿ ಮತ್ತು ಭರವಸೆಯ ಯುವ ಆಟಗಾರರ ಉತ್ತಮ ಸಂಯೋಜನೆಯಿದೆ.
ದೌರ್ಬಲ್ಯ: ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ದುರ್ಬಲ. ಶಿಮ್ರಾನ್ ಹೆಟ್‌ಮೈರ್ ಅಸ್ಥಿರ ಪ್ರದರ್ಶನ.
ಮುಖ್ಯ ಆಟಗಾರರು: ಜೋಸ್ ಬಟ್ಲರ್, ಯಜುವೇಂದ್ರ ಚಹಲ್, ಸಂಜು ಸ್ಯಾಮ್ಸನ್. ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2014ರಲ್ಲಿ ಫೈನಲ್‌ಗೇರಿದ್ದೇ ಅತ್ಯುತ್ತಮ ಸಾಧನೆ.
ಶಕ್ತಿ: ತಂಡದ ಬ್ಯಾಟಿಂಗ್ ಪಡೆಯಲ್ಲಿ ಧವನ್, ಲಿವಿಂಗ್‌ಸ್ಟೋನ್, ರಾಜಪಕ್ಸ, ಸ್ಯಾಮ್ ಕರನ್‌ರಂತಹ ಸಿಡಿಗುಂಡುಗಳಿದ್ದಾರೆ.
ದೌರ್ಬಲ್ಯ: ಅಂತಿಮ ಓವರ್‌ಗಳಲ್ಲಿ ನಿಖರ ದಾಳಿ ಸಂಘಟಿಸಬಲ್ಲ ಬೌಲಿಂಗ್ ತುಕಡಿಯಿಲ್ಲ.
ಮುಖ್ಯ ಆಟಗಾರರು: ಶಿಖರ್ ಧವನ್, ಸ್ಯಾಮ ಕರನ್, ಅರ್ಷದೀಪ್ ಸಿಂಗ್. ಡೆಲ್ಲಿ ಕ್ಯಾಪಿಟಲ್ಸ್
ಒಮ್ಮೆಯೂ ಐಪಿಎಲ್ ಗೆಲ್ಲದ ತಂಡಗಳಲ್ಲಿ ಡೆಲ್ಲಿಯೂ ಒಂದು. ಕಳೆದ ನಾಲ್ಕು ಆವೃತ್ತಿಗಳಿಂದ ತಂಡ ಬಹಳ ಸುಧಾರಿಸಿದೆ. ಶಕ್ತಿ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಪೃಥ್ವಿ ಶಾ ಅವರಿರುವ ಪ್ರಬಲ ಅಗ್ರಕ್ರಮಾಂಕ.
ದೌರ್ಬಲ್ಯ: ರಿಷಭ್ ಪಂತ್ ಗೈರಿನಿಂದ ಅತ್ಯುತ್ತಮ ವಿಕೆಟ್ ಕೀಪಿಂಗ್ ಬ್ಯಾಟರ್ ಇಲ್ಲವಾಗಿದ್ದಾರೆ.
ಮುಖ್ಯ ಆಟಗಾರರು: ಡೇವಿಡ್ ವಾರ್ನರ್, ಅಕ್ಷರ್ ಪಟೇಲ್, ಅನ್ರಿಚ್ ನೋರ್ಜೆ. ಗುಜರಾತ್ ಟೈಟಾನ್ಸ್
2022ರಲ್ಲಿ ಮೊದಲ ಬಾರಿಗೆ ಆಡಿದ ಗುಜರಾತ್ ಟೈಟಾನ್ಸ್ ಇದೇ ಯತ್ನದಲ್ಲಿ ಪ್ರಶಸ್ತಿ ಗೆದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಈ ಬಾರಿಯೂ ಬಲಿಷ್ಠವಾಗಿದೆ.
ಶಕ್ತಿ: ಹಾರ್ದಿಕ್, ಶುಭಮನ್ ಗಿಲ್, ಶಮಿ, ಮಿಲ್ಲರ್‌ರಂತಹ ಆಟಗಾರರ ಉಪಸ್ಥಿತಿಯಲ್ಲಿ ತಂಡ ಪ್ರಬಲವಾಗಿದೆ.
ದೌರ್ಬಲ್ಯ: ಲಾಕೀ ಫರ್ಗ್ಯುಸನ್ ಕೋಲ್ಕತ ಪಾಲಾಗಿರುವುದರಿಂದ ಬೌಲಿಂಗ್ ವಿಭಾಗ ಸ್ವಲ್ಪ ಸಂದಿಗ್ಧದಲ್ಲಿದೆ.
ಮುಖ್ಯ ಆಟಗಾರರು: ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಮೊಹಮ್ಮದ್ ಶಮಿ. ಲಕ್ನೋ ಸೂಪರ್ ಜೈಂಟ್ಸ್
2022ರಲ್ಲಿ ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಆಡಿದ ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಮೀರುವುದೇ ಅದರ ಗುರಿ.
ಶಕ್ತಿ: ರಾಹುಲ್, ಡಿ ಕಾಕ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಆಲ್‌ರೌಂಡರ್‌ಗಳ ದೊಡ್ಡ ಬಳಗವೇ ಇದೆ.
ದೌರ್ಬಲ್ಯ: ಸ್ಪಿನ್ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ರವಿ ಬಿಷ್ಣೋಯಿ ಒಬ್ಬರೇ ಇಲ್ಲಿ ಆಸರೆ.
ಮುಖ್ಯ ಆಟಗಾರರು: ಕ್ವಿಂಟನ್ ಡಿ ಕಾಕ್, ಕೆ.ಎಲ್.ರಾಹುಲ್, ಮಾರ್ಕ್ ವುಡ್.