Advertisement

ದೇಶದ ಹತ್ತು ಕೋವಿಡ್ 19 ಹಾಟ್‌ಸ್ಪಾಟ್‌ಗಳು

09:33 AM Apr 02, 2020 | Hari Prasad |

ಕೋವಿಡ್ 19 ವೈರಸ್  ಸೋಂಕು ದೇಶವ್ಯಾಪಿ ಹಬ್ಬುತ್ತಿರುವ ನಡುವೆಯೇ ಕೇಂದ್ರ ಸರಕಾರವು 10 ಹಾಟ್‌ ಸ್ಪಾಟ್‌ಗಳನ್ನು ಗುರುತಿಸಿದೆ.  10ಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಅಂಥ ಸ್ಥಳವನ್ನು ಕ್ಲಸ್ಟರ್‌ ಎಂದು ಗುರುತಿಸಲಾಗುತ್ತದೆ. ಒಂದೇ ಪ್ರದೇಶದಲ್ಲಿ ಹಲವಾರು ಕ್ಲಸ್ಟರ್‌ಗಳು ಹುಟ್ಟಿಕೊಂಡರೆ, ಅಂಥ ಪ್ರದೇಶಗಳನ್ನು ಹಾಟ್‌ ಸ್ಪಾಟ್‌ ಎಂದು ಕರೆಯಲಾಗುತ್ತದೆ.

Advertisement

1. ನಿಜಾಮುದ್ದೀನ್‌, ನವದೆಹಲಿ
ಆಗಿದ್ದೇನು?: ಮಾ.1ರಿಂದ 15ರವರೆಗಿನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿ. ಹಲವರಲ್ಲಿ ರೋಗಲಕ್ಷಣ. 35ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್‌. 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ.

2. ದಿಲ್ಶಾದ್‌ ಗಾರ್ಡನ್‌, ನವದೆಹಲಿ
ಆಗಿದ್ದೇನು?: ಸೌದಿ ಅರೇಬಿಯಾದಿಂದ ಆಗಮಿಸಿದ್ದ ರೋಗಿಯಲ್ಲಿ ಸೋಂಕು ಇತ್ತು. ಚಿಕಿತ್ಸೆ ಪಡೆದಿದ್ದ ಮೊಹಲ್ಲಾ ಕ್ಲಿನಿಕ್‌ ಮುಚ್ಚಿ, ಅಲ್ಲಿಗೆ ಬಂದಿದ್ದವರೆಲ್ಲರ ಕ್ವಾರಂಟೈನ್‌.

3. ಭಿಲ್ವಾರಾ, ರಾಜಸ್ಥಾನ
ಆಗಿದ್ದೇನು?: ಆಸ್ಪತ್ರೆಯೊಂದರ 6 ವೈದ್ಯರು, ಸಿಬಂದಿಗೆ ಸೋಂಕು ದೃಢ. 20 ಲಕ್ಷಕ್ಕೂ ಹೆಚ್ಚು ಮಂದಿ ನಿಗಾದಲ್ಲಿ.

4. ಮೀರತ್‌, ಉತ್ತರಪ್ರದೇಶ
ಆಗಿದ್ದೇನು?: ದುಬೈನಿಂದ ವಾಪಸಾಗಿದ್ದ ವ್ಯಕ್ತಿಯಲ್ಲಿ ಸೋಂಕು. ಒಟ್ಟು 35 ಮಂದಿ ಕ್ವಾರಂಟೈನ್‌ಗೆ.

Advertisement

5. ಗೌತಮಬುದ್ಧ ನಗರ, ಉತ್ತರಪ್ರದೇಶ
ಆಗಿದ್ದೇನು?: ಖಾಸಗಿ ಕಂಪನಿಯ ನೌಕರರ ಮೂಲಕ ಹಬ್ಬಿದ ವೈರಸ್‌. ನೋಯ್ಡಾ ಹಾಗೂ ಗ್ರೇಟರ್‌ ನೋಯ್ಡಾದಲ್ಲಿ 1,865 ಮಂದಿ ಮೇಲೆ ನಿಗಾ. ಖಾಸಗಿ ಕಂಪನಿ ಜತೆ ನೇರ ಮತ್ತು ಪರೋಕ್ಷ ಸಂಪರ್ಕ ಹೊಂದಿದವರ ಮಾಹಿತಿ ಸಂಗ್ರಹ ಶುರು

6. ಮುಂಬಯಿ, ಮಹಾರಾಷ್ಟ್ರ
ಆಗಿದ್ದೇನು?: ನಿವೃತ್ತ ವೈದ್ಯ ಸಾವಿಗೀಡಾದ ಬಳಿಕ ಪುತ್ರನಲ್ಲಿ ಸೋಂಕು. ವೈದ್ಯನಿದ್ದ ಆಸ್ಪತ್ರೆ ಸದ್ಯಕ್ಕೆ ಮುಚ್ಚಲು ಆದೇಶ. ಜಾಗೃತಿ ಮೂಡಿಸಲು ಕ್ರಮ.

7. ಪುಣೆ
ಆಗಿದ್ದೇನು?: ಹೆಚ್ಚಿನ ಜನಸಂಖ್ಯೆ ಇದ್ದ ಕಾರಣ ಬೇಗ ವ್ಯಾಪಿಸಿದ ವೈರಸ್‌. ಸಂಪೂರ್ಣ ಸ್ತಬ್ಧ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಆಸ್ಪತ್ರೆಗಳಿಗೆ ರವಾನೆ.

8. ಅಹಮದಾಬಾದ್‌, ಗುಜರಾತ್‌
ಆಗಿದ್ದೇನು?: 3 ಸಾವು. ಮೃತರೊಂದಿಗೆ ಸಂಪರ್ಕ ಹೊಂದಿರುವವರ ಮೇಲೆ ನಿಗಾ, ಚಿಕಿತ್ಸೆ

9. ಕಾಸರಗೋಡು, ಕೇರಳ
ಆಗಿದ್ದೇನು?: 82 ಪ್ರಕರಣಗಳ ಪೈಕಿ 72 ಪ್ರಕರಣಗಳಿಗೆ ವಿದೇಶಿ ಮೂಲವಿದೆ. ಸಂಪೂರ್ಣ ಲಾಕ್‌ ಡೌನ್‌ ಮಾಡಲಾಗಿದೆ. ಅತ್ಯವಶ್ಯಕ ವಸ್ತುಗಳು ಬಿಟ್ಟರೆ ಬೇರೇನೂ ಸಿಗುತ್ತಿಲ್ಲ. ಸಾವಿರಾರು ಮಂದಿಯನ್ನು ಪ್ರತ್ಯೇಕಿಸಲ್ಪಟ್ಟ ಕೊಠಡಿಗಳಲ್ಲಿ ಇಟ್ಟು ನಿಗಾ ವಹಿಸಲಾಗಿದೆ.

10. ಪಟ್ಟಣಂತಿಟ್ಟ, ಕೇರಳ
ಆಗಿದ್ದೇನು?: ಗಲ್ಫ್ ರಾಷ್ಟ್ರಗಳಿಂದ ವಾಪಸಾಗಿರುವವರ ಮೂಲಕ ಹರಡಿದ ಸೋಂಕು. ಸೋಂಕಿತರ ಕುಟುಂಬ ಸದಸ್ಯರು, ಸಂಬಂಧಿಕರು, ನೇರವಾಗಿ ಸಂಪರ್ಕಕ್ಕೆ ಬಂದವರನ್ನು ನಿಗಾದಲ್ಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next