Advertisement

ದಿಲ್ಲಿ : ಹಿಂಸೆಗೆ ತಿರುಗಿದ ರೇಪ್‌ ಪ್ರತಿಭಟನೆ; 10 ಪೊಲೀಸರಿಗೆ ಗಾಯ

03:54 PM Aug 25, 2018 | Team Udayavani |

ಹೊಸದಿಲ್ಲಿ : ದಿಲ್ಲಿಯ ವಸಂತ ಕುಂಜ ಪ್ರದೇಶದಲ್ಲಿ ನಡೆಯಿತೆನ್ನಲಾದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ ವಿದ್ಯಮಾನದಲ್ಲಿ ಪ್ರತಿಭಟನಕಾರರು ಕೆಲವು ಕಾರುಗಳನ್ನು ಪುಡಿಗುಟ್ಟಿ  ಪೊಲೀಸ್‌ ಸಿಬಂದಿಗಳ ಮೇಲೆ ಕಲ್ಲೆಸೆದಿರುವುದು ವರದಿಯಾಗಿದೆ.

Advertisement

ಉದ್ರಿಕ್ತ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಘುವಾಗಿ ಬಲ ಪ್ರಯೋಗಿಸಿದರೂ ಕನಿಷ್ಠ 10 ಮಂದಿ ಪೊಲೀಸ್‌ ಸಿಬಂದಿಗಳು ತಿಕ್ಕಾಟದಲ್ಲಿ ಗಾಯಗೊಂಡರು. 

ಸುಮಾರು 20 ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು. ಇವರ ಕಲ್ಲೆಸೆತಕ್ಕೆ ಸಿಲುಕಿ ಗಾಯಗೊಂಡ ಪೊಲೀಸರಲ್ಲಿ ಇಬ್ಬರು ಸಹಾಯಕ ಕಮಿಷನರ್‌ ಕೂಡ ಸೇರಿದ್ದಾರೆ. 

11 ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತೆಂಬ ವದಂತಿಯನ್ನು ಅನುಸರಿಸಿ ದಿಲ್ಲಿಯ ರಂಗಾಪುರಿ ಪಹಾಡಿ ಪ್ರದೇಶದಲ್ಲಿನ ಝುಗ್ಗಿ ಸಮೂಹದ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು ಎಂದು ದಿಲ್ಲಿ ನೈಋತ್ಯ ಪೊಲೀಸ್‌ ಡೆಪ್ಯುಟಿ ಕಮಿಷನರ್‌ ದೇವೇಂದರ್‌ ಆರ್ಯ ತಿಳಿಸಿದರು. 

ಘಟನಯನ್ನು ಅನುಸರಿಸಿ ವಸಂತ ಕುಂಜ ಪ್ರದೇಶದಲ್ಲಿನ ರಯಾನ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ಬಳಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಸುದ್ದಿ  ತಿಳಿದ ಪೊಲೀಸರು ಒಡನೆಯೇ ಸ್ಥಳಕ್ಕೆ ಧಾವಿಸಿದರು. 

Advertisement

ಅಷ್ಟರೊಳಗಾಗಿ ಹೋತಿ ಕ್ಯಾಂಪ್‌ ಜುಗ್ಗಿ ಸಮೀಪದ ಛತ್ತರ್‌ಪುರ ಮಹಿಳಾಪುರ ರಸ್ತೆಯ ಕ್ಯಾರೇಜ್‌ವೇ ಗಳನ್ನು ಪ್ರತಿಭಟನಕಾರರು ತಡೆದಿದ್ದರು. ರೇಪ್‌ ಆರೋಪಿಯನ್ನು ಅದಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ ಹೊರತಾಗಿಯೂ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲೆಸೆಯಲು ಆರಂಭಿಸಿದರು. ಪರಿಣಾಮವಾಗಿ ಸುಮಾರು 10 ಪೊಲೀಸರು ಗಾಯಗೊಂಡರು. 

ತತ್‌ಕ್ಷಣ ಸ್ಥಳದಿಂದ ಚದುರುವಂತೆ ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರೂ ಫ‌ಲಕಾರಿಯಾಗಲಿಲ್ಲ. ಆಗ ಅನಿವಾರ್ಯವಾಗಿ ಪೊಲೀಸರು ಕಾನೂನು ಮತ್ತು ಶಿಸ್ತನ್ನು ಪಾಲಿಸಲು ಲಘುವಾದ ಬಲ ಪ್ರಯೋಗ ನಡೆಸಿ ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಿದರು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next