Advertisement

ಕಲಬುರಗಿ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆಗೆ ತಾತ್ಕಾಲಿಕ ತಡೆ

01:18 PM Feb 24, 2022 | Team Udayavani |

ಕಲಬುರಗಿ: ತಿಂಗಳೊಳಗೆ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆ ನಡೆಸಬೇಕೆಂಬ ಆದೇಶಕ್ಕೆ ಇಲ್ಲಿನ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

Advertisement

ಕಳೆದ ಫೆ. 4ರಂದು ಇಲ್ಲಿನ ಹೈಕೋರ್ಟ್ ಏಕಸದಸ್ಯತ್ವ ಪೀಠ ಹಳೇ ಮೀಸಲಾತಿಯಂತೆ ಮೇಯರ್- ಉಪ ಮೇಯರ್ ಚುನಾವಣೆ ನಡೆಸಬೇಕು ಹಾಗೂ ಹೊಸದಾಗಿ ಐವರು ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳದೇ ನ. 6ರಂದು ಹೊರಡಿಸಲಾದ ಅಧಿಸೂಚನೆ ಪ್ರಕಾರ ಹಿಂದಿನ ಮತದಾರರ ಪಟ್ಟಿಯಂತೆ ಜತೆಗೆ ಹಿಂದಿನ ಮೀಸಲಾತಿಯಂತೆ ಚುನಾವಣೆ ನಡೆಸಬೇಕೆಂಬ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಮುಂದಿನ ವಿಚಾರಣೆ ಮಾರ್ಚf 14ಕ್ಕೆ ನಿಗದಿ ಮಾಡಲಾಗಿದೆ. ಒಟ್ಟಾರೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಲಾಗಿದೆ.

ನ. 6ರಂದು ಮೇಯರ್ ಉಪಮೇಯರ್ ಚುನಾವಣೆಗೆ ಅಧಿ‌ಸೂಚನೆ ಹೊರಡಿಸಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ಹಾಗೂ ಮತದಾರರ ಪಟ್ಟಿಯಲ್ಲಿ ಪಾಲಿಕೆ ಸದಸ್ಯರ 55 ಹಾಗೂ ಸಂಸದ, ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯ ಸೇರಿ 63 ಮತದಾರರ ಪಟ್ಟಿ ಪ್ರಕಟಿಸಲಾಗಿ ನವೆಂಬರ್ 20ರಂದು ಚುನಾವಣೆ ನಿಗದಿ ಮಾಡಲಾಗಿತ್ತು.‌ ಆದರೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ತದನಂತರ ಚುನಾವಣೆ ಕಳೆದ ಫೆ. 5ರಂದು ದಿನಾಂಕ ನಿಗದಿಗೊಳಿಸಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಇದನ್ನೂ ಓದಿ:ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?

ಅದಲ್ಲದೇ ಹೊಸದಾಗಿ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರಘುನಾಥ ಮಲ್ಕಾಪುರೆ, ಭಾರತಿ ಶೆಟ್ಟಿ, ತುಳಸಿ ಮುನಿರಾಜ ಹಾಗೂ ಲೇಹರಸಿಂಗ್ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂದು ಒಟ್ಟಾರೆ 68 ಮತದಾರರ ಪಟ್ಟಿ ಅಂತಿಮಗೊಳಿಸಲಾಗಿತ್ತು. ಆದರೆ ಇದರ ವಿರುದ್ದ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿ ಹಳೆ ಮೀಸಲಾತಿ ಹಾಗೂ ಹಿಂದಿನ ಮತದಾರರ ಪಟ್ಟಿಯಂತೆ ಅಂದರೆ ಹೊಸದಾಗಿ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಕಲ್ಪಿಸದಿರುವ ಜತೆಗೆ ತಿಂಗಳೊಳಗೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಹೈಕೋರ್ಟ್ ಪೀಠ ಆದೇಶಿಸಿತ್ತು. ಆದರೆ ಮತದಾನಕ್ಕೆ ಅವಕಾಶ ದೊರಕದಿದ್ದಕ್ಕೆ ಐವರು ವಿಧಾನ ಪರಿಷತ್ ಸದಸ್ಯರು ಹಾಗೂ ಹೊಸ ಮೀಸಲಾತಿಗೆ ಅವಕಾಶ ಕಲ್ಪಿಸದಿರುವುದಕ್ಕೆ ಸರ್ಕಾರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು.

Advertisement

ಮೇಲ್ಮನವಿ ಆಲಿಸಿದ ಇಲ್ಲಿನ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಗಳಾದ ಎಸ್. ಆರ್. ಕೃಷ್ಣಕುಮಾರ ಹಾಗೂ ಹೇಮಲೇಖಾ ಅವರನ್ನೊಳಗೊಂಡ ಪೀಠ ಗುರುವಾರ ತಡೆಯಾಜ್ಣೆ ನೀಡಿದೆ.

ಬಿಜೆಪಿ ಪರವಾಗಿ ಹಿರಿಯ ನ್ಯಾಯವಾದಿ ಅಶೋಕ ಹಾರನಳ್ಳಿ, ಅಡ್ವೋಕೇಟ್ ಜನರಲ್ ನಾವದಗಿ ವಾದಿಸಿದರು. ಹೊಸದಾಗಿ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಸಿಗದಿದ್ದಕ್ಕೆ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಈಗ ರಿಲೀಫ್ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next