Advertisement

ನಗರದ ಮಾರುಕಟ್ಟೆಗಳ ತಾತ್ಕಾಲಿಕ ಸ್ಥಳಾಂತರ

11:05 AM Mar 28, 2020 | Suhan S |

ಬೆಂಗಳೂರು: ಕೋವಿಡ್ 19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನಗರದ ಎಲ್ಲ ಮಾರುಕಟ್ಟೆಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಹಣ್ಣು ತರಕಾರಿ ಖರೀದಿಗೆ ಸಮಸ್ಯೆ ಎದುರಾಗಿದೆ.

Advertisement

ಈ ಅಭಾವವನ್ನು ತಪ್ಪಿಸುವ ಉದ್ದೇಶದಿಂದ ನಗರಕಲಾಸಿಪಾಳ್ಯ ಮಾರುಕಟ್ಟೆಯನ್ನು ಬೊಮ್ಮಸಂದ್ರ ಬಳಿಯ ಸಿಂಗೇನ ಆಗ್ರಹಾರ ಎಪಿಎಂಸಿ ಮೈದಾನಕ್ಕೆ ಸ್ಥಳಾಂತರಿಸಲು ಪಾಲಿಕೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ನಗರಕ್ಕೆ ಬರುತ್ತಿರುವ ಅಗತ್ಯ ವಸ್ತುಗಳು ಇತರೆ ಚಿಲ್ಲರೆ ಮಾರುಕಟ್ಟೆಗೆ ಸರಬರಾಜಿಗೆ ತೊಂದರೆ ಉಂಟಾಗಿದೆ.

ಈಗ ಕೋವಿಡ್ 19  ಭೀತಿ ಇರುವುದರಿಂದ ಜನ ಹೆಚ್ಚು ಸೇರದಂತೆ ಅಂತರ ಕಾಯ್ದುಕೊಳ್ಳಲು ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಆಗ್ರಹಾರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಸಗಟು ವ್ಯಾಪಾರಿಗಳೂಂದಿಗೆ ಚರ್ಚೆ ನಡೆಸಲಾಗಿದ್ದು, ಮೈದಾನಕ್ಕೆ ಸ್ಥಳಾಂತರ ಮಾಡುವುದರಿಂದ ಅಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಮತ್ತು ಗ್ರಾಹಕರು ಮತ್ತು ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಪಾಡಲು ಪಾಲಿಕೆ ಮುಂದಾಗಿದೆ.

ಸ್ಥಳಾಂತರಕ್ಕೆಪಾಲಿಕೆ ಸಿದ್ಧತೆ :  ನಗರದ ಆಯ್ದ ಮೈದಾನಗಳಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವುದಕ್ಕೆ ನಗರದ ಪ್ರಮುಖ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಆಟದ ಮೈದಾನಗಳಿಗೆ ಸ್ಥಳಾಂತರಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಾರಕ್ಕಿ ಮಾರುಕಟ್ಟೆಯನ್ನು ಜರಗನಹಳ್ಳಿ ಮೈದಾನಕ್ಕೆ, ಪೂರ್ವ ವಲಯದಲ್ಲಿ ಪುಲಕೇಶಿ ನಗರದಲ್ಲಿ ಎರಡು ಮೈದಾನಗಳನ್ನು ಗುರುತಿಸಲಾಗಿದ್ದು, ಪಶ್ಚಿಮ ವಲಯದಲ್ಲಿ ಸ್ವಾಮಿ ವಿವೇಕಾನಂದ ಮೈದಾನಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ :  ಬಿಬಿಎಂಪಿ ವ್ಯಾಪ್ತಿಯ 113 ಮಾರುಕಟ್ಟೆಗಳ ಸ್ವಚ್ಛತಾ ಕಾರ್ಯಾಚರಣೆಗೆ ಪಾಲಿಕೆ ಮುಂದಾಗಿದೆ. ಇತ್ತೀಚೆಗಷ್ಟೇ ಕೃಷ್ಣ ರಾಜೇಂದ್ರ (ಕೆ.ಆರ್‌)ಮಾರುಕಟ್ಟೆಯನ್ನು ಪೌರ ಕಾರ್ಮಿಕರು ಹಾಗೂ ಮಾರ್ಷಲ್‌ ಗಳು ಸಂಪೂರ್ಣ ವಾಗಿ ಸ್ವತ್ಛಗೊಳಿಸಿದ್ದರು. ಶುಕ್ರವಾರ ಶಿವಾಜಿನಗರದ ರಸೆಲ್‌ ಮಾರುಕಟ್ಟೆ ಯನ್ನು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫ‌ìರಾಜ್‌ಖಾನ್‌ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್‌ಗ‌ಳು ಸ್ವಚ್ಛಗೊಳಿಸಿದ್ದಾರೆ. ಇದೇ ವೇಳೆ ಶಿವಾಜಿನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಸೋಂಕು ನಿವಾರಕರ ದ್ರಾವಣವನ್ನು ಸಿಂಪಡಣೆ ಮಾಡಲಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಮಳಿಗೆಗಳನ್ನು ತೆರವುಗೊಳಿಸಲಾಗುತ್ತಿದೆ.

Advertisement

ರೆಸಲ್‌ ಮಾರುಕಟ್ಟೆ ಸ್ವಚ್ಛತೆ ಕಾರ್ಯಾಚರಣೆಯಲ್ಲಿ 70 ಜನ ಪೌರಕಾರ್ಮಿಕರು, 33 ಜನ ಮಾರ್ಷಲ್‌ಗ‌ಳು ಭಾಗವಹಿಸಿದ್ದಾರೆ. ನಗರದ ಎಲ್ಲ ಮಾರುಕಟ್ಟೆ ಸ್ವಚ್ಚ ಮಾಡಲಾಗುವುದು. ಸೋಂಕು ನಿವಾರಣಾ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. – ಸರ್ಫರಾಜ್‌ ಖಾನ್‌, ಬಿಬಿಎಂಪಿ ಜಂಟಿ ಆಯುಕ್ತ

ಮಾರುಕಟ್ಟೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಮಳಿಗೆಗಳಿವೆ. ನಿತ್ಯ ಇಡೀ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆ. ನಗರಕ್ಕೆ ಬರುತ್ತಿರುವ ಅಗತ್ಯ ವಸ್ತುಗಳು ಇತರೆ ಚಿಲ್ಲರೆ ಮಾರುಕಟ್ಟೆಗೆ ಸರಬರಾಜಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಸೂಕ್ತ ವ್ಯವಸ್ಥೆ ಮಾಡಿದ ನಂತರ ಸ್ಥಳಾಂತರ ಮಾಡುವುದಕ್ಕೆ ಕೇಳಿದ್ದೇವೆ.  ಆರ್‌.ವಿ. ಗೋಪಿ, ಕಲಾಸಿಪಾಳ್ಯ ಹಣ್ಣು, ತರಕಾರಿ ವರ್ತಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next