Advertisement
ಇದೇ ವೇಳೆ ಆದಾಯ ತೆರಿಗೆ ಕಂಡುಕೊಂಡ ಮಾಹಿತಿ ಪ್ರಕಾರ ದಕ್ಷಿಣದ ಮೂರು ರಾಜ್ಯಗಳಲ್ಲಿರುವ ಗುತ್ತಿಗೆದಾರರು, ವ್ಯಾಪಾರಸ್ಥರು, ಕೃಷಿ ಸಂಬಂಧಿತ ಉದ್ಯಮಿಗಳು ಮಾರ್ಚ್ ತಿಂಗಳ ಎರಡನೇ ವಾರದಿಂದ ಭಾರಿ ಪ್ರಮಾಣದಲ್ಲಿ ಚೆಕ್ ಮತ್ತು ಇತರ ಮಾರ್ಗದ ಮೂಲಕ ಪಾವತಿ ಮಾಡಲು ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ. ಅದಕ್ಕೆ ಪೂರಕವಾಗಿ ತೆರಿಗೆ ಇಲಾಖೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ಹಂತದಲ್ಲಿ ಉದ್ಯಮಿಯೊಬ್ಬರು ಕೆಲವೇ ಗಂಟೆಗಳ ಅವಧಿಯಲ್ಲಿ 20 ಬಾರಿ ಅತ್ಯಧಿಕ ಮೊತ್ತವನ್ನು ಪಾವತಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
ನಗದು ಕೊರತೆ ನಿವಾರಿಸಲು ಪಾಯಿಂಟ್ ಆಫ್ ಸೇಲ್ಸ್ ಮಷಿನ್ ಗಳ ಮೂಲಕ ಸಣ್ಣ ಪಟ್ಟಣಗಳಲ್ಲಿ ಪ್ರತಿ ದಿನ 2 ಸಾವಿರ ರೂ. ವರೆಗೆ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು SBI ಟ್ವೀಟ್ ಮೂಲಕ ಮಾಹಿತಿ ನೀಡಿದೆ. SBI ಮತ್ತು ಇತರ ಯಾವುದೇ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಮೂಲಕ ಮೂರನೇ ಹಂತದ ನಗರ ಪ್ರದೇಶಗಳಲ್ಲಿ 1 ಸಾವಿರ ರೂ. ವರೆಗೆ ವಿಥ್ ಡ್ರಾ ಮಾಡಲು ಅವಕಾಶವಿದೆ. 1 ಮತ್ತು 2ನೇ ಹಂತದ ನಗರಗಳಲ್ಲಿ ಶುಲ್ಕ ರಹಿತವಾಗಿ 1 ಸಾವಿರ ರೂ. ವಿಥ್‌ಡ್ರಾಕ್ಕೆ ಅವಕಾಶವಿದೆ ಎಂದು SBIನ ಮುಖ್ಯ ನಿರ್ವಹಣಾ ಅಧಿಕಾರಿ ನೀರಜ್ ವ್ಯಾಸ್ ತಿಳಿಸಿದ್ದಾರೆ. ಇಂದು ಮುಕ್ತಾಯ: ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಉಂಟಾಗಿರುವ ನಗದು ಕೊರತೆ ಶುಕ್ರವಾರದ ಒಳಗಾಗಿ ಕೊನೆಗೊಳ್ಳಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. ನಗದು ಕೊರತೆ ಇರುವ ಪ್ರದೇಶಗಳಿಗೆ ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಹಣ ಎನ್ನುವುದು ಚಾಲನೆಯಲ್ಲಿರಬೇಕು. ಜನರು ತಮ್ಮ ಬಳಿಯಲ್ಲಿಯೇ ಅದನ್ನು ಇರಿಸಿಕೊಂಡಿದ್ದರೆ ಬ್ಯಾಂಕ್ ಗಳಿಗೂ ವಹಿವಾಟು ಕಷ್ಟವಾಗುತ್ತದೆ ಎಂದು ರಜನೀಶ್ ಕುಮಾರ್ ಹೇಳಿದ್ದಾರೆ.
Related Articles
Advertisement
6.08 ಲಕ್ಷ : SBI ಹೊಂದಿರುವ POS4.78 ಲಕ್ಷ : ಹಣ ವಿಥ್‌ಡ್ರಾ ಮಾಡುವ ವ್ಯವಸ್ಥೆ ಇರುವ POS