Advertisement

ಟೋಲ್‌ ಸಂಗ್ರಹ ತಾತ್ಕಾಲಿಕ ಮುಂದೂಡಿಕೆ 

09:16 AM Aug 17, 2018 | Team Udayavani |

ಕೋಟ/ಹೆಜಮಾಡಿ: ರಾಷ್ಟ್ರೀಯಹೆದ್ದಾರಿ 66ರಲ್ಲಿ ಸ್ಥಳೀಯರಿಗೂ ಟೋಲ್‌ ವಸೂಲು ಮಾಡುವ ನವಯುಗ ಕಂಪೆನಿ ಕ್ರಮಕ್ಕೆ ಸ್ಥಳೀಯರ, ರಾಷ್ಟ್ರೀಯ ಹೆದ್ದಾರಿ ಹೋರಾಟ ಗಾರರು, ವಿವಿಧ ಸಂಘಟನೆಗಳಿಂದ  ತೀವ್ರ ವಿರೋಧ ವ್ಯಕ್ತವಾಗಿದೆ.
 
ಗುರುವಾರ ಟೋಲ್‌ ಸಂಗ್ರ ಹಣೆ ಕ್ರಮಕ್ಕೆ ಕೋಟ ಮತ್ತು ಪಡುಬಿದ್ರಿಯ ಹೆಜಮಾಡಿಯಲ್ಲಿ ಕಂಪೆನಿ ಮುಂದಾಗುತ್ತಿದ್ದಂತೆ ಜನರು ಜಮಾಯಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಕಂಪೆನಿ ಎರಡೂ ಕಡೆ ಮುಂದಾಗುತ್ತಿದ್ದಂತೆ, ಪೊಲೀಸರು, ತಹಶೀಲ್ದಾರರು ಆಗಮಿಸಿದ್ದು ಪರಿ ಸ್ಥಿತಿ ತಹಬಂದಿಗೆ ತರುವ ಯತ್ನ ಮಾಡಿದ್ದಾರೆ.  

Advertisement

ಮಾತುಕತೆಯ ಬಳಿಕ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆಸಲಾಗುವ ಸಭೆಯ ಬಳಿಕಷ್ಟೇ ಟೋಲ್‌ ಸಂಗ್ರಹದ ಕುರಿತಾಗಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಅದುವರೆಗೆ ಹೆಜಮಾಡಿ, ಸಾಸ್ತಾನ ಟೋಲ್‌ ಗೇಟ್‌ಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳಬೇಕೆಂದು ಅಧಿಕಾರಿಗಳ ಸಮಕ್ಷಮ ತೀರ್ಮಾನಿಸಲಾಯಿತು. 

ಕೆಎ 20 ವಾಹನಕ್ಕೂ ಟೋಲ್‌ 
ಕಳೆದ ಒಂದು ವರ್ಷದಿಂದ ಕೆಎ. 20 ವಾಹನಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಇದರಿಂದ ಕಂಪೆನಿಗೆ 200 ಕೋಟಿ ರೂ. ನಷ್ಟವಾಗಿದೆ. ಅದನ್ನು ಸರಕಾರ ನೀಡಬೇಕು ಎಂದು ಕಂಪೆನಿ ಆಗ್ರಹ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ಎಲ್ಲಾ ವಾಹನಗಳಿಂದ ಟೋಲ್‌ ಸಂಗ್ರಹಕ್ಕೆ ಆದೇಶ ನೀಡಲಾಗಿತ್ತು ಎನ್ನಲಾಗಿದೆ. 

500 ಮೀ. ಒಳಗೂ ಟೋಲ್‌!
ನೂತನ ನಿಯಮ ಜಾರಿಯಾದರೆ 500 ಮೀ. ಹೋಗಲೂ ಟೋಲ್‌ ಕಟ್ಟಿ ಹೋಗಬೇಕಾದ ಸ್ಥಿತಿ ಬರಲಿದೆ. ಪೆಟ್ರೋಲ್‌ ಹಾಕಿಸಲು, ಅಂಗಡಿಯಿಂದ ಸಾಮಾನು ತರಲೂ ಟೋಲ್‌ ಕಟ್ಟಬೇಕಾಗುತ್ತದೆ ಎನ್ನುವ ಆತಂಕ ಸ್ಥಳೀಯರದ್ದು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಕಾಏಕಿ ಟೋಲ್‌ ಸಂಗ್ರಹಕ್ಕೆ ಮುಂದಾಗಿದ್ದು ಸರಿಯಲ್ಲ ಹಾಗೂ ಕಾಮಗಾರಿ ಪೂರ್ಣಗೊಳ್ಳುವ ತನಕ ಯಾವುದೇ ಕಾರಣಕ್ಕೆ ಶುಲ್ಕ ಸಂಗ್ರಹಿಸಲು ಬಿಡುವುದಿಲ್ಲ. ಅನಂತರವೂ  5ಕಿ.ಮೀ. ಒಳಗಿನ ವಾಣಿಜ್ಯ ಮತ್ತು 8 ಕಿ.ಮೀ ವರೆಗಿನ ವಾಣಿಜ್ಯೇತರ ಎಲ್ಲಾ  ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ಈ ಕುರಿತು ಹೋರಾಟ ಮುಂದುವರಿಯಲಿದೆ.
– ಪ್ರತಾಪ್‌ ಶೆಟ್ಟಿ,
ಅಧ್ಯಕ್ಷರು ಹೆದ್ದಾರಿ ಜಾಗೃತಿ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next