Advertisement
ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಮರಳು ಸಮಸ್ಯೆ ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಕಳೆದ ಆರು ತಿಂಗಳಿಂದ ಮರಳು ಸಾಗಾಟಕ್ಕೆ ಪರವಾನಿಗೆ ದೊರೆಯುತ್ತದೆ ಎಂದು ಕಾದು ಕುಳಿತ ಜಿಲ್ಲೆಯ ಜನತೆಗೆ ಸೀಸನ್ ಮುಗಿಯುತ್ತ ಬಂದರು ಕೂಡ ಮರಳು ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದನ್ನೇ ಬಂಡವಾಳವನ್ನಾಗಿರಿಸಿಕೊಂಡ ಕೆಲವು ವ್ಯಕ್ತಿಗಳು ಬೈಂದೂರು, ಶಿರೂರು ಪರಿಸರದಲ್ಲಿ ಅನಧಿಕೃತ ಮರಳು ಸಾಗಾಟ ಮಾಡುವ ಮೂಲಕ ಹೊರ ಜಿಲ್ಲೆಗಳಿಗೂ ರವಾನಿಸುತ್ತಿದ್ದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಂತಹ ದಂಧೆಗೆ ಬ್ರೇಕ್ ಹಾಕುವುದಕ್ಕೆ ವಿಶೇಷ ತಂಡ ರಚಿಸಲಾಗಿದೆ. ಮಂಗಳೂರಿನಿಂದ ಮರಳು ತುಂಬಿಕೊಂಡು ಬೈಂದೂರು ಪರಿಸರದಲ್ಲಿ ಸಣ್ಣ ಟಿಪ್ಪರ್‌ಗಳಲ್ಲಿ ಸಾಗಿಸುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.ಪ್ರತಿ ಪೋಲಿಸ್ ಗೇಟ್‌ಗಳಲ್ಲೂ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.ಉಡುಪಿ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನಗಳ ಕುರಿತು ಮಾಹಿತಿ ಪಡೆಯಲಾಗುತ್ತದೆ. ಸಂಶಯಾಸ್ಪದ ಸ್ಥಳಗಳಿಗೆ ಆರಕ್ಷಕ ತಂಡ ಭೕಟಿ ನೀಡಿದೆ.ಟೋಲ್‌ಗೇಟ್‌ಗಳಲ್ಲಿ ಮರಳು ತುಂಬಿದ ಲಾರಿಗಳ ಕುರಿತು ತಕ್ಷಣ ಆರಕ್ಷಕರಿಗೆ ಮಾಹಿತಿ ರವಾನೆಯಾಗುತ್ತದೆ.ಇದರಿಂದಾಗಿ ಮಂಗಳೂರಿನಿಂದ ದೊಡ್ಡ ಲಾರಿಗಳಲ್ಲಿ ಮರಳು ತುಂಬಿಕೊಂಡ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಸಾಗಿಸುವ ವ್ಯವಹಾರಕ್ಕೆ ಒಂದಿಷ್ಡು ಕಡಿವಾಣ ಬಿದ್ದಂತಾಗಿದೆ ಹಾಗೂ ಸಾರ್ವಜನಿಕರೂ ಅನಧಿಕೃತ ಮರಳು ವ್ಯವಹಾರ ನಡೆಸುವ ವಾಹನಗಳ ಕುರಿತು ಮಾಹಿತಿ ಇದ್ದರೆ ಆರಕ್ಷಕ ಇಲಾಖೆಗೆ ತಿಳಿಸಬಹುದಾಗಿದೆ.