Advertisement

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ: ಮಗು ಸೇರಿ ಮೂರು ಮಂದಿ ದುರ್ಮರಣ!

10:25 AM Apr 26, 2021 | Team Udayavani |

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಪಲ್ಟಿಯಾಗಿ ಮಗು ಸೇರಿ ಮೂರು ಮಂದಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಮೃತ ದುರ್ದೈವಿಗಳನ್ನು ಹಿರಿಯೂರು ನಿವಾಸಿಗಳಾದ ಸೆಲ್ವಿ (35 ವ), ದೀಪಿಕಾ (06 ವ), ನೀಲಮ್ಮ (29 ವ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:#StayStrongIndia: ಕೋವಿಡ್ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ಯುಎಇ

ಕೂಲಿ ಕಾರ್ಮಿಕರು ಹಿರಿಯೂರಿನಿಂದ ಚಳ್ಳಕೆರೆ ಕಾಂಕ್ರೀಟ್ ಕೆಲಸಕ್ಕೆಂದು ಟೆಂಪೋದಲ್ಲಿ ಹೋಗುತ್ತಿದ್ದರು. ಈ ವೇಳೆ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ಅಪಘಾತ ನಡೆದಿದೆ.

Advertisement

ಸ್ಥಳಕ್ಕೆ ಹಿರಿಯೂರು ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next