ಶ್ರೀರಂಗಪಟ್ಟಣ: ಕಳೆದ ಎರಡು ತಿಂಗಳಿಂದ ಶ್ರೀರಂಗಪಟ್ಟಣದ ಪ್ರಸಿದ್ಧ ರಂಗನಾಥ ಹಾಗೂ ಗಂಜಾಂ ನಿಮಿಷಾಂಭದ ದೇಗುಲಗಳು ಕೊರೊನಾ ಹಾಗೂ ಲಾಕ್‌ಡೌನ್ ಕಾರಣದಿಂದ ಬಾಗಿಲು ಮುಚ್ಚಿದ್ದವು. ಕೊರೊನಾ ಲಾಕ್‌ಡೌನ್ ಸ್ಥಗಿತ ಗೊಳಿಸಿ ಕೊರೊನಾ ನಿಯಮ ಪಾಲಿಸಿ ಸೋಮ ವಾರದಿಂದ ದೇಗುಲಗಳ ಬಾಗಿಲು ತೆರೆಯಲು ಸರ್ಕಾರ ಆದೇಶ ಮಾಡಿತ್ತು.
ಸೋಮವಾರ ಮತ್ತೆ ಜಿಲ್ಲಾಧಿಕಾರಿಗಳ ಆದೇಶ ಪಡೆದು ಶ್ರೀರಂಗನಾಥ ಹಾಗೂ ಗಂಜಾಂ ನಿಮಿ ಷಾಂಬ ದೇವಾಲಯಗಳನ್ನು ಆಯಾ ದೇವಾಲಯದಕಾರ್ಯನಿರ್ವಹಣಾಧಿಕಾರಿಗಳಮೂಲಕ ತಡವಾಗಿಯಾದರೂ ಅರ್ಚಕರು ತೆರೆದು ದಿನ ನಿತ್ಯದ ಪೂಜೆ ಆರಂಭಿಸಿದ್ದಾರೆ. ಮುನ್ನೂರಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಪಡೆದಿದ್ದಾರೆ.
ಶ್ರೀರಂಗಪಟ್ಟಣದ ವಿವಿಧ ದೇವಾಲಯಗಳಿಗೆ ಪ್ರತಿನಿತ್ಯ ಈ ಹಿಂದಿನ ದಿನಗಳಲ್ಲಿ ಸಾವಿರಾರು ಮಂದಿ ದೇವರ ದರ್ಶನ ಪಡೆದು ಹೋಗುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಮುಚ್ಚಿದ್ದ ದೇವಾಲಯಗಳು ತೆರೆದಾಗ ಕಡಿಮೆ ಸಂಖ್ಯೆಯಲ್ಲಿಭಕ್ತರು ದೇವರ ದರ್ಶನ ಪಡೆಯಲು ಆಗಮಿಸಿದರು.
ಭಕ್ತರಿಗೆ ಕೊರೊನಾ ನಿಯಮ: ದೇವಾಲಯ ಪ್ರವೇಶ ದ್ವಾರದಲ್ಲಿ ಭಕ್ತರಿಗೆ ಮಾಸ್ಕ್ ಧರಿಸಲುಸೂಚನೆ, ಕೈಗೆ ಸ್ಯಾನಿಟೈಸರ್ ಹಾಕಿ, ಟೆಂಪರೇಚರ್ ಪರಿಶೀಲಿಸಿ ಕೊರೊನಾ ನಿಯಮದಂತೆ ದೇವರ ದರ್ಶನಕ್ಕೆ ಭಕ್ತರನ್ನು ಒಳ ಬಿಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ನಮ್ಮ ಸಿಬ್ಬಂದಿಗಳು ದೇವಾಲಯ ಪ್ರವೇಶ ದ್ವಾರದ ಬಳಿ ಮಾಹಿತಿ ನೀಡುತ್ತಿದ್ದು, ಭಕ್ತರಿಗೆ ಮಂಗಳಾರತಿ ಮಾತ್ರ ನೀಡ ಲಾಗುತ್ತಿದೆ. ಸದ್ಯಕ್ಕೆ ತೀರ್ಥಪ್ರಸಾದ, ವಿಶೇಷ ಪೂಜೆಯ ಸೇವೆ ರದ್ದು ಮಾಡಲಾಗಿದೆ. ದೇವಾಲಯ ತೆರೆದ ಮೊದಲ ದಿನಶ್ರೀನಿಮಿಷಾಂಬ ದೇವಾಲಯಕ್ಕೆ ಸುಮಾರು 300 ಮಂದಿ ಭಕ್ತರು ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಮೇಲ್ವಿಚಾರಕ ಸೂರ್ಯನಾರಾಯಣ್ ಭಟ್ ತಿಳಿಸಿದ್ದಾರೆ.
ಪ್ರಸಿದ್ಧ ಶ್ರೀರಂಗನಾಥ ಹಾಗೂ ಗಂಜಾಂನಿಮಿಷಾಂಭ ದೇವಾಲಯಕ್ಕೆ ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿನ ಹೆಚ್ಚಿನ ಭಕ್ತರಿದ್ದಾರೆ. ಈ ಹಿಂದೆ ಪ್ರತಿ ನಿತ್ಯ ಈ ದೇಗುಲಕ್ಕೆ ಸಾವಿರಾರುಸಂಖ್ಯೆಯ ಭಕ್ತರು ಸೇರಿದಂತೆ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಇದೀಗ ಕೊರೊನಾ ಆತಂ ಕದ ಕಾರಣದಿಂದ ಭಕ್ತರು ಸೇರಿದಂತೆ ಇನ್ನು ಪ್ರವಾಸಿಗರು ಇತ್ತ ಆಗಮಿಸ್ತಿಲ್ಲ. ಭಕ್ತರಿಲ್ಲದ ಕಾರಣಕ್ಕೆ ದೇ ವಾಲಯದ ಆವರಣ ಬೆರಳಣಿಕೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ ªರು.