Advertisement

ದರ್ಶನಕ್ಕೆ ಸಿದ್ಧಗೊಳ್ಳುತ್ತಿವೆ ಸಂಗಮದ ದೇಗುಲಗಳು

12:53 PM Jun 07, 2020 | Suhan S |

ಕೂಡಲಸಂಗಮ: ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ಚಿಕ್ಕ ಸಂಗಮದ ಸಂಗಮೇಶ್ವರ ದೇವಾಲಯ, ಬಸವನ ಬಾಗೇವಾಡಿ ಬಸವೇಶ್ವರ ದೇವಾಲಯಕ್ಕೆ ಜೂ.8ರಿಂದ ಪ್ರವೇಶಕ್ಕೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸಿಬ್ಬಂದಿ ಶನಿವಾರ ಸಿದ್ಧತಾ ಕಾರ್ಯದಲ್ಲಿ ತೊಡಗಿದೆ..

Advertisement

ಮಾ.17ರಿಂದಲೇ ಕೋವಿಡ್ ವೈರಸ್‌ ಹರಡುವ ಭೀತಿಯಿಂದ ಸರ್ಕಾರದ ನಿರ್ದೇಶನದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಈ ದೇವಾಲಯಗಳ ಪ್ರವೇಶಕ್ಕೆ ನಿಷೇಧ ವಿಧಿಸಿತ್ತು. 82 ದಿನಗಳ ನಂತರ ಆರಂಭಗೊಳ್ಳುತ್ತಿರುವುದರಿಂದ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಯಾವುದೇ ಪೂಜೆ, ಅಭಿಷೇಕ, ಧಾರ್ಮಿಕ ಕಾರ್ಯಗಳಿಗೆ ಅವಕಾಶ ಇರುವುದಿಲ್ಲ. 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಇರುವುದಿಲ್ಲ. ಬೆಳಗ್ಗೆ 6:30ರಿಂದ 12 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ವಾರದ ನಂತರ ದರ್ಶನದ ಅವಧಿ ಹೆಚ್ಚಿಸಲಾಗುವುದು. ನಿತ್ಯ 500ರಿಂದ 1000 ಭಕ್ತರ ದರ್ಶನಕ್ಕೆ ಸಿದ್ಧತೆ ಮಾಡಿದ್ದು, ಸಾಮಾಜಿಕ ಅಂತರ ಕಾಪಾಡಲು ಇತರ ಕಾರ್ಯಗಳಿಗಾಗಿ 30 ಜನ ಹೊರಗುತ್ತಿಗೆ ಕಾರ್ಮಿಕರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿದ್ದಾರೆ.

ಸಂಗಮೇಶ್ವರ ದೇವಾಲಯ ಹೊರ ಆವರಣದ ಪ್ರವೇಶ ದ್ವಾರದಲ್ಲಿ ಒಳ ಹೊಗಲು, ಹೊರಗೆ ಬರಲು ಪ್ರತ್ಯೇಕ ಮಾರ್ಗ ಮಾಡಲಾಗಿದ್ದು, ಪ್ರತಿ 6 ಮೀಟರ್‌ಗೆ ಒಂದರಂತೆ ಬಾಕ್ಸ್‌ಗಳನ್ನು ಹಾಕಿದ್ದಾರೆ. ಕೈತೊಳೆದುಕೊಳ್ಳಲು 6 ಮೀಟರ್‌ಗೆ ಒಂದರಂತೆ ನಲ್ಲಿಗಳನ್ನು ಅಳವಡಿಸಿದ್ದು, ಮುಖ್ಯದ್ವಾರದಲ್ಲಿ ಪ್ರತಿಯೊಬ್ಬರು ದೇಹದ ಉಷ್ಣತೆ ಪರೀಕ್ಷೆ ತಪಾಸಣೆ ಮಾಡಿಸಿಕೊಂಡು ಸ್ಯಾನಿಟೈಸರ್‌ ಪಡೆದು ದರ್ಶನಕ್ಕೆ ಹೊಗಬೇಕು.

ಜೂ.8ರಿಂದ ದೇವಾಲಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. –ರಾಜಶ್ರೀ ಅಗಸರ, ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next