ಶಿರಸಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೇವಸ್ಥಾನಗಳನ್ನು ಸರಕಾರದ ಕಟ್ಟು ಪಾಡುಗಳಿಂದ ಮುಕ್ತ ಮಾಡುತ್ತೇವೆ ಎಂದಿರುವದು ಸಂತಸ ತಂದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಒಳಗಡೆ ಇದಕ್ಕೊಂದು ಹೊಸ ಸ್ವರೂಪ ಕೊಡುತ್ತೇವೆ ಎಂಬುದಾಗಿ ಹೇಳಿದ್ದು ತುಂಬಾ ಒಳ್ಳೆಯದು. ಸುಮಾರು ನಾಲ್ಕು ದಶಕಗಳಿಂದ ಅಂದರೆ ಒಂದು ತಲೆಮಾರಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಹೋರಾಟ ಕೊನೆಗೊಳ್ಳುವ ಕಾಲ ಹತ್ತಿರ ಬಂದಿದೆ. ಇದು ಬಾಕಿ ರಾಜ್ಯಗಳಿಗೂ ಮಾದರಿಯಾಗಲಿ ಎಂದೂ ಶ್ರೀಗಳು ಪ್ರತಿಕ್ರಿಯೆ ನೀಡಿದರು.
ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆರಾಧನೆ
ಶಂಕರಭಗವತ್ಪಾದರ ಅವತಾರವೆಂದೇ ಲೋಕವಿಖ್ಯಾತರಾದ ಕಾಂಚೀಕಾಮಕೋಟಿಯ ಅರವತ್ತೆಂಟನೆಯ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆರಾಧನೆಯಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪಾಲ್ಗೊಂಡರು.
ಕಂಚಿಯ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆದ ಆರಾಧನೆಯಲ್ಲಿ ಶ್ರೀಗಳವರು ಪರಮಾಚಾರ್ಯರ ಅಧಿಷ್ಠಾನಕ್ಕೆ ಪೂಜೆಯನ್ನು ಸಲ್ಲಿಸಿದರು. ಕಾಸರಗೋಡಿನ ಎಡನೀರು ಮಠದ ಸ್ವಾಮಿಗಳು ಬೇರೆ ಬೇರೆ ರಾಜ್ಯದ ಅನೇಕ ಸ್ವಾಮೀಜಿಗಳು ಕೂಡ ಭಾಗವಹಿಸಿದ್ದರು.