Advertisement
ಬಯಲುಸೀಮೆ ಪ್ರದೇಶವಾಗಿರುವುದರಿಂದ ಮತ್ತು ಯಾವುದೇ ನದಿ ಮೂಲಗಳು ಇರುವು ದರಿಂದ ಕೇವಲ ಮಳೆಯಾಶ್ರಿತವಾಗಿದ್ದು ಜನರು ನಂಬಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಕೆರಗಳಲ್ಲಿನ ನೀರು ಸಹ ಇಲ್ಲದಂತಾಗುತ್ತಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಹೂಳು ಎತ್ತಿಸಿ ಕಲ್ಯಾಣಿಗಳಿಗೆ ಕಲ್ಯಾಣಿಗಳಿಗೆ ಜಿಪಂ ಹೊಸ ಜೀವ ನೀಡುತ್ತಿದೆ.
Related Articles
Advertisement
ನವೀಕರಣ ಕಾಮಗಾರಿ: 1920ರ ಮಾನವ ದಿನಗಳನ್ನು ಸೃಜಿಸಲಾಗಿದ್ದು, 4.67,216 ರೂ.ಮೊತ್ತ ಸಾಮಗ್ರಿಗಳಿಗೆ ಹಾಗೂ 5.54 ಲಕ್ಷ ರೂ.ಕೂಲಿಗಳಿಗೆ ನೀಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಶೇ.60ರಷ್ಟು ದಿನಗೂಲಿ ಹಾಗೂ 40 ವಸ್ತುಗಳ ಖರೀದಿ ಅನುಪಾತದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಕಲ್ಯಾಣಿ ಒಳಾಂಗಣ ಕಾಮಗಾರಿ ಮುಗಿದ ಬಳಿಕ, ಅದರ ಸುತ್ತಮುತ್ತ ಅವರಣ ಗೊಡೆ ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಕಲ್ಯಾಣಿಗಳಲ್ಲಿರುವ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸುವ ಯೋಜನೆಯಲ್ಲಿ ಪಂಚಾಯಿತಿ ಮಾಡಿರುವುದು ಗಮನಾರ್ಹ.
ಜಲಮೂಲಗಳು ಭರ್ತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಅಭಿವೃದ್ಧಿಗೊಂಡ ಕಲ್ಯಾಣಿ ಅಂತರ್ಜಲವೃದ್ಧಿ ಕಲ್ಯಾಣಿಗಳು ಅಂತರ್ಜಲ ಮರುಪೂರ್ಣ ಘಟಕಗಳಾಗಿವೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗೋಕಟ್ಟೆ, ಚೆಕ್‌ಡ್ಯಾಂ, ಬ್ಯಾರೇಜ್ ಸೇರಿ ಮತ್ತಿತರ ಜಲಮೂಲಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕೃಷಿ ಚಟುವಟಿಕೆ, ಜನ ಜಾನುವಾರುಗಳು, ಮೀನುಗಾರಿಕೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿವೆ.
ಕಲ್ಯಾಣಿಗಳಲ್ಲಿ ನಿರ್ವಹಣೆ ಕೊರತೆ:
ಕಳೆದ ಎರಡು ವರ್ಷಗಳಲ್ಲಿ ನರೇಗಾ ಯೋಜನೆಯಡಿ ಒಟ್ಟು 63 ಕಲ್ಯಾಣಿಗಳನ್ನು ನವೀಕರಣ ಮಾಡುವುದಕ್ಕೆ ಯೋಜಿಸಲಾ ಗಿತ್ತು. ಹೊಸಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು 38 ಕಲ್ಯಾಣಿಗಳನ್ನು ಗುರುತಿಸಲಾಗಿತ್ತು. ದೇವನಹಳ್ಳಿ ತಾಲೂಕಿನಲ್ಲಿ 9, ನೆಲಮಂಗಲ ತಾಲೂಕಿನಲ್ಲಿ 16 ಕಲ್ಯಾಣಿಗಳನ್ನು ಗುರುತಿಸ ಲಾಗಿದೆ. ಶತಮಾನ ಗಳ ಹಿಂದೆ ವೈಜ್ಞಾನಿಕವಾಗಿ ನಿರ್ಮಾಣ ಗೊಂಡಿ ರುವ ಕಲ್ಯಾಣಿಗಳಲ್ಲಿ ಇಂದಿಗೂ ನೀರ ಸೆಲೆ ಉಕ್ಕುತ್ತಿದೆ. ನಿರ್ವಹಣೆ ಕೊರತೆಯಿಂದ ಎಲ್ಲವೂ ಪಾಳು ಬಿದ್ದಿದ್ದವು. ಹೂಳು ತುಂಬಿಕೊಂಡು ಶಿಥಿಲಾವಸ್ಥೆಯಲ್ಲಿದ್ದ ಬಾವಿಗಳಲ್ಲಿ ಗಿಡಗಂಟಿ, ಪೊದೆಗಳು ಬೆಳೆದು ಬಿಕೋ ಎನ್ನುತ್ತಿದ್ದವು.
ಜಲ ಮೂಲಗಳು ಸಂರಕ್ಷಣೆ ನಿಟ್ಟಿನಲ್ಲಿ ಇಂತಹ ಕಲ್ಯಾಣಿಗಳನ್ನು ಭದ್ರಪಡಿಸಿ ವರ್ಷವಿಡೀ ನೀರು ನಿಲ್ಲುವಂತೆ ನೋಡಿಕೊಂಡರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. -ಟಿ.ಕೆ. ರಮೇಶ್, ಉಪ ಕಾರ್ಯದರ್ಶಿ
-ಮಹೇಶ್