ಉಡುಪಿ: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶುಕ್ರವಾರದ ಕೋಟೆ ಬಾಗಿಲು ಹೊಸ ಬೀದಿಯ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ದೇವಾಸ್ಥಾನ ಜೀರ್ಣೋದ್ಧಾರ ಕಾರ್ಯವು ದೊಡ್ಡಣ್ಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ಪರಮಪೂಜ್ಯ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಆ ಪ್ರಯುಕ್ತ ನಡೆದ ಸಭೆಯಲ್ಲಿ ಮದರ ಲಕ್ಕಮ್ಮ ಟ್ರಸ್ಟ್ ಹಾಗೂ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ದೇವಾಲಯದ ಭಕ್ತರು ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಸರ್ವಾನುಮತದಿಂದ ಶ್ರೀ ರಮಾನಂದ ಗುರೂಜಿ ಅವರನ್ನು ನೇಮಕ ಮಾಡಿದ್ದಾರೆ.
ದೇವಸ್ಥಾನದ ಮುಖ್ಯಸ್ಥ ಲಕ್ಷ್ಮೀಶ್ ಮತ್ತು ಇತರ ಸದಸ್ಯರು ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿಯ ಕ್ಷೇತ್ರಕ್ಕೆ ಭೇಟಿ ನೀಡಿ ರಮಾನಂದ ಗುರೂಜಿ ಅವರನ್ನು ಗೌರವಿಸಿದರು.
ಜೀರ್ಣಾವಸ್ಥೆಯಲ್ಲಿರುವ ದೇಗುಲಗಳ ಜೀರ್ಣೋದ್ಧಾರ ಇಡೀ ಊರಿಗೆ ಮಾತ್ರವಲ್ಲ ನಾಡಿಗೆ ಒಳಿತನ್ನು ಮಾಡಲಿದೆ. ಈ ಐತಿಹಾಸಿಕ ಕಾರ್ಯಕ್ಕೆ ಎಲ್ಲರ ಸಂಕಲ್ಪ ವಿಕಲ್ಪವಾಗದೆ ಮುನ್ನಡೆಸಲಿ ಎಂದು ಗುರೂಜಿ ಅವರು ಆಶಿಸಿ ಜೀರ್ಣೋದ್ದಾರಕ್ಕೆ ಬೇಕಾದ ಎಲ್ಲ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆಯನ್ನು ನೀಡುವುದಾಗಿ ಆಶೀರ್ವದಿಸಿರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಂಗಸ್ವಾಮಿ ಸಿ.ಎನ್., ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಉಪಾಧ್ಯಕ್ಷ ವೆಂಕಟೇಶ್ ಹೆಚ್.ಆರ್., ಟ್ರಸ್ಟಿಗಳಾದ ನಾಗರತ್ನ, ರವಿಕುಮಾರ್ ಸಿ.ಎನ್., ಶಾಂತ, ಅಕ್ಷತ, ಸಮಿತಿ ಉಪಾಧ್ಯಕ್ಷರಾದ ಗುರುಮೂರ್ತಿ ಸಿ. ಟಿ, ರಂಗರಾಜು, ಮರುಳ ಸಿದ್ದೇಶ್ವರ ಸ್ವಾಮಿ, ಯಶವಂತ ಶೆಟ್ಟಿ, ಧವಳಶ್ರೀ, ಬ್ರಿತಿವರ್ದಿನಿ ಉಪಸ್ಥಿತರಿದ್ದರು.
ಆದಿಶಕ್ತಿ ಕ್ಷೇತ್ರದ ಉಸ್ತುವಾರಿಗಳಾದ ಕುಸುಮ ನಾಗರಾಜ್, ಸ್ವಸ್ತಿಕ್ ಆಚಾರ್ಯ ಹಾಗೂ ಕ್ಷೇತ್ರ ಪುರೋಹಿತರ ನೇತೃತ್ವದಲ್ಲಿ ಎಲ್ಲರಿಗೂ ಪ್ರಸಾದ ವಿತರಿಸಿ ಸನ್ಮಾನಿಸಲಾಯಿತು.