ಕೇರಳ: ದೇವಸ್ಥಾನದ ಆರ್ಚಕನೊಬ್ಬ ಬುರ್ಖಾ ಧರಿಸಿಕೊಂಡು ರಸ್ತೆ ಬದಿಯಲ್ಲಿ ತಿರುಗಿ ಜನರ ಕೈಯಿಗೆ ಸಿಕ್ಕಿಬಿದ್ದ ಘಟನೆ ಕೇರಳದ ಕೊಯಿಲಾಂಡಿ ನಡೆದಿದೆ.
ಜಿಷ್ಣು ನಂಬೂತಿರಿ (27) ಮೆಪ್ಪಯೂರ್ ಹತ್ತಿರದ ದೇವಸ್ಥಾನದಲ್ಲಿ ಆರ್ಚಕರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬುರ್ಖಾ ಹಾಕಿಕೊಂಡು ರಸ್ತೆಯಲ್ಲಿ ತಿರುಗುತ್ತಿದ್ದಾಗ, ಸಂಶಯಗೊಂಡ ಸ್ಥಳೀಯರು ಕೊಯಿಲಾಂಡಿ ಜಂಕ್ಷನ್ ಬಳಿ ತಡೆದು ವಿಚಾರಿಸಿದಾಗ, ಬುರ್ಖಾದೊಳಗಿರುವುದು ಪುರುಷವೆಂದು ಗೊತ್ತಾಗಿದೆ.
ಸ್ಥಳೀಯರ ಬಳಿ ತನಗೆ ಚಿಕನ್ ಫಾಕ್ಸ್ ಇದೆ ಆ ಕಾರಣದಿಂದ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿದ್ದೇನೆ ಎಂದಿದ್ದಾರೆ. ಸ್ಥಳೀಯರು ಬುರ್ಖಾ ಹಾಕಿಕೊಂಡು ಸಂಶಯದಿಂದ ಅಲೆದಾಡುತ್ತಿರುವ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಪೊಲೀಸರಿಗೆ ಆರ್ಚಕನಲ್ಲಿ ಚಿಕನ್ ಫಾಕ್ಸ್ ನ ಯಾವುದೇ ಪ್ರಾಥಮಿಕ ಲಕ್ಷಣ ಕಂಡು ಬಂದಿಲ್ಲ ಎಂದು ಪಿಟಿಐ ವರದಿ ತಿಳಿಸಿದೆ.
ವ್ಯಕ್ತಿಯ ಬಗ್ಗೆ ವಿಚಾರಿಸಿ, ಆತನ ವಿಳಾಸವೆಲ್ಲ ಪರಿಶೀಲಿಸಿದ ಬಳಿಕ, ಠಾಣೆಗೆ ಆತನ ಸಂಬಂಧಿಕರು ಬಂದ ನಂತರ ವಿಚಾರಣೆ ನಡೆಸಿ ಬಿಟ್ಟಿದ್ದೇವೆ. ಆತ ಯಾವುದೇ ಅಪರಾಧವೆಸಗಿಲ್ಲ, ಈ ಕಾರಣದಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.