Advertisement

ಇಂದಿನಿಂದ ಶ್ರೀಕಂಠೇಶ್ವರ ದೇಗುಲದಲ್ಲಿ ಗಿರಿಜಾ ಕಲ್ಯಾಣ

06:05 PM Jun 26, 2021 | Team Udayavani |

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿವಾರ್ಷಿಕವಾಗಿ ಜರುಗುವ ಗಿರಿಜಾ ಕಲ್ಯಾಣ ಉತ್ಸವಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದು, ಸಹಸ್ರಾರುಭಕ್ತರು ಇದನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದರು.

Advertisement

ಆದರೆ,ಈಬಾರಿ ಕೊರೊನಾ ಲಾಕ್‌ಡೌನ್‌ನಿಂದ ಭಕ್ತರನ್ನು ಹೊರಗಿಟ್ಟು ವಿವಾಹನಡೆಸಲಾಗುತ್ತಿದೆ.ದೇಗುಲದಲ್ಲಿ ಜೂ.26ರ ಶನಿವಾರದಿಂದ ಜುಲೈ3ರವರೆಗೆ ಒಂದು ವಾರಗಳ ಕಾಲ ಈ ವಿವಾಹನೆರವೇರಲಿದೆ. ವಿಜೃಂಭಣೆ, ಅದ್ಧೂರಿಯಾಗಿ ನಡೆಯಬೇಕಿದ್ದ ಗಿರಿಜಾ-ಶಂಕರರ ಮದುವೆಗೆ ಭಕ್ತರಪ್ರವೇಶವನ್ನು ನಿಷೇಧಿಸಿ ಅರ್ಚಕರು, ಅಧಿಕಾರಿಗಳು ಹಾಗೂ ಅವಶ್ಯಕವಿರುವ ಸಿಬ್ಬಂದಿ ನೇತೃತ್ವದಲ್ಲಿನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿರುವುದರಿಂದಮದುವೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಈಮದುವೆ ಈ ಬಾರಿ ಬಹು ಬೇಗನೇ ಆರಂಭವಾಗಿಅಷಾಢಕ್ಕೂ ಮುನ್ನವೇ ಪೂರ್ಣಗೊಳ್ಳಲಿದೆ.ಸಹಸ್ರಾರು ಭಕ್ತರು ಹಾಗೂ ಸೇವಾರ್ಥದಾರರಸಮ್ಮುಖದಲ್ಲಿ ಗಿರಿಜೆಗೂ ಶ್ರೀಕಂಠೇಶ್ವರನಿಗೂಮದುವೆ ಮಾಡಿಸಿ ಕಣ್ತುಂಬಿಕ್ಕೊಳ್ಳುವುದೇ ಹಲವರಪಾಲಿಗೆ ಪುಣ್ಯದ ಕೆಲಸ. ಈ ದೇವ ವಿವಾಹವುಬರೋಬ್ಬರಿ 8 ದಿನಗಳ ‌ ಕಾಲ ಶುದ್ಧ ವೈದಿಕ ಸಂಪ್ರದಾಯದೊಂದಿಗೆ ಜಾ®ಪದ ‌ ಸಾಂÓ¢ತಿ‌ ಯ ಸೊಬಗಿನೊಂದಿಗೆ ಅನಾವರಣಗೊಳ್ಳುವ ವೈಭವದ ಕಲ್ಯಾಣ ಮಹೋತ್ಸವ ಇದಾಗಿದೆ.

ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next