Advertisement

Education: ಆಕ್ಸ್‌ಫ‌ರ್ಡ್‌-ಮುಂಬೈ ವಿವಿಯಿಂದ ದೇಗುಲ ನಿರ್ವಹಣೆ ಕೋರ್ಸ್‌

08:47 PM Dec 23, 2023 | Pranav MS |

ಮುಂಬೈ: ದೇಗುಲ ನಿರ್ವಹಣೆ ವಿಷಯದಲ್ಲಿ ಕೋರ್ಸ್‌ ಆರಂಭಿಸಲು ಆಕ್ಸ್‌ಫ‌ರ್ಡ್‌ ಸೆಂಟರ್‌ ಫಾರ್‌ ಹಿಂದೂ ಸ್ಟಡೀಸ್‌ನೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಮುಂಬೈ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗವು ಆಕ್ಸ್‌ಫ‌ರ್ಡ್‌ ಸೆಂಟರ್‌ ಫಾರ್‌ ಹಿಂದೂ ಸ್ಟಡೀಸ್‌ ಸಹಯೋಗದಲ್ಲಿ ದೇಗುಲ ನಿರ್ವಹಣೆ ವಿಷಯದಲ್ಲಿ ವಿವಿಧ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭಿಸಲಿದೆ.

Advertisement

ಇದು ಆಫ್ಲೈನ್‌ ಹಾಗೂ ಆನ್‌ಲೈನ್‌ ಎರಡೂ ರೀತಿಯಲ್ಲೂ ಲಭ್ಯವಿರಲಿದೆ. ಪದವಿ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳೊಂದಿಗೆ ಹಿಂದೂ ತತ್ವಶಾಸ್ತ್ರದ ಸಮಗ್ರ ಅಧ್ಯಯನದ ಮೇಲೆ ಕೋರ್ಸ್‌ ಕೇಂದ್ರೀಕರಿಸಲಿದೆ ಎಂದು ಮುಂಬೈ ವಿವಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next