ಬಸವನಬಾಗೇವಾಡಿ: ರಾಜ್ಯದ ಜನರು ಇನ್ನೂ ಆರು ತಿಂಗಳು ಕೋವಿಡ್ ದೊಂದಿಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆಇದೆ. ದೇವಿ ಕೃಪೆಯಿಂದ ದೇಶವು ಶೀಘ್ರ ಕೋವಿಡ್ ಮುಕ್ತವಾಗಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಮುತ್ತಗಿ ಗ್ರಾಮದಲ್ಲಿ ದುರ್ಗಾದೇವಿ ನೂತನ ಮೂರ್ತಿ ಪ್ರತಿಷ್ಠಾನೆ ಹಾಗೂ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಎರಡನೇ ಹಂತಕ್ಕೆ ಕಾಲಿಟ್ಟಿದ್ದು ಜನರು ಜಾಗೃತಿಯಿಂದ ಇರಬೇಕು ಎಂದರು. ರೈತರು ಮತ್ತು ಭೋವಿ (ವಡ್ಡರು) ಸಮಾಜದ ಜನರು ಶ್ರಮಿಕರು. ನಿತ್ಯ ಕಾಯಕ ದೊಂದಿಗೆ ತಮ್ಮ ಜೀವನ ಸಾಗಿಸುವಂತ ಜನರು. ಇತಿಹಾಸದಲ್ಲಿ ಭೋವಿ ಸಮಾಜದ ಕೊಡುಗೆ ಅಪಾರವಾಗಿದೆ. ಅನೇಕ ಮಠ ಮಂದಿಯಗಳನ್ನು ಮತ್ತು ಬೃಹತ್ ಕಟ್ಟಡ ಗಳನ್ನು ವಾಸ್ತು ಶಿಲ್ಪ ಮೂಲಕ ನಿರ್ಮಿಸುವಂತ ಕಲೆ ಹೊಂದಿದೆ ಎಂದು ಹೇಳಿದರು.
ದಸರಾ ಹಬ್ಬ ಹಾಗೂ ದೇವಿ ಪ್ರತಿಷ್ಠಾಪನೆ ಹೆಚ್ಚು ಆಚರಣೆ ಮಾಡುವುದು ಪಶ್ಚಿಮ ಬಂಗಾಳ ರಾಜ್ಯದಲ್ಲಿ. ಹೆಚ್ಚು ದೇವಿ ಪ್ರತಿಷ್ಠಾಪಿಸಿ ಅದ್ಧೂರಿಯಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ರಾಜ್ಯದಲ್ಲಿ ಕೂಡಾ ದೇವಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಈ ಬಾರಿ ಕೋವಿಡ್‌ನಿಂದ ಸರಳ ರೀತಿ ಆಚರಿಸುವಂತ ಸ್ಥಿತಿ ಬಂದಿದೆ ಎದರು. ಸಾನ್ನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಸಂಗಬಸವ ಶಿವಚಾರ್ಯರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ದೇವಸ್ಥಾನಗಳ ಮೂಲಕ ಸಿಗುತ್ತದೆ ಎಂದರು.
ಜಾತಿ, ಧರ್ಮ, ಬೇಧ, ಭಾವ ಬಿಟ್ಟು ಮನುಷ್ಯ ಸಮಾಜದ ಸೇವೆಗಳನ್ನು ತೊಡಗಿಕೊಂಡಾಗ ಮಾತ್ರ ಅವರ ಹೆಸರು ಉಳಿಯಲು ಸಾಧ್ಯ. ಅನೇಕ ಮಠ, ಮಂದಿರಗಳನ್ನು ನಿರ್ಮಾಣ ಮಾಡುವ ಮೂಲಕ ಭೋವಿ ಸಮುದಾಯ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಆರ್.ಎಸ್. ಸೂಳಿಬಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಒಕ್ಕೂಲೂತನ ಹುಟ್ಟುವಳಿ ಸಹಕಾರಿ ಸಂಘದ ಅಧ್ಯಕ್ಷ ಪ್ರೇಮು ಮ್ಯಾಗೇರಿ, ತಾಪಂ ಸದಸ್ಯ ಬಸವರಾಜ ಚಿಮ್ಮಲಗಿ, ಈರಣ್ಣ ಹಾರಿವಾಳ, ಸುರೇಶ ತಳವಾರ, ರಾಮು ಹೊಸಪೇಟಿ, ಶಿವಶಂಕರಗೌಡ ಪಾಟೀಲ, ಜಗದೇವ ಮನಹಳ್ಳಿ, ಶ್ರೀಶೈಲ ದೇವರಗಾವ, ಭೀಮಸಿ ಜಗ್ಗಲ, ಸೋಮಶೇಖರ ಹೊಸಹಳ್ಳಿ, ಚನ್ನಪ್ಪ ಸಿಡಿ, ಜಯನಾರಾಯಣ, ಡಿ.ಜಿ.ಎಂ ಮಂಜುನಾಥಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಧುಸೂಧನ ಶಿಲ್ಪಿ ಸ್ವಾಗತಿಸಿದರು ವೈ.ಎ. ಗೊಲ್ಲರ ಕಾರ್ಯಕ್ರಮ ನಿರೂಪಿಸಿದರು.