ಹುಣಸೂರು: ಸ್ವಾತಂತ್ರ್ಯೋಯ್ಸವದ ಅಮೃತ ಮಹೋತ್ಸವದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಕೇಂದ್ರಗಳ ಸಚ್ಛತಾ ಕಾರ್ಯಕ್ರಮದಡಿ ಹುಣಸೂರು ನಗರದ ಮಂಜುನಾಥ ಸ್ವಾಮಿ ದೇವಾಲಯ ಸೇರಿದಂತೆ ಐದು ದೇವಾಲಯಗಳ ಆವರಣ ವನ್ನು ಸ್ವಯಂಸೇವಕರು ಸ್ವತ್ಛಗೊಳಿಸಿದರು.
ಸಚ್ಛತಾ ಕಾರ್ಯದಲ್ಲಿ ಯೋಜನೆಯ ಸ್ವಯಂ ಸೇವಕರು ಸೇರಿ ಇಡೀ ಆವರಣದಲ್ಲಿದ್ದ ಗಿಡಗಳನ್ನು ತೆರವುಗೊಳಿಸಿ, ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಸಂಗ್ರಹಿಸಿ, ಕಸಗುಡಿಸಿ ಸಚ್ಛಗೊಳಿಸಿ ಇಡೀ ಆವರಣವನ್ನು ಅಂದಗೊಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಯೋಜನಾ ನಿರ್ದೇಶಕ ಮುರಳೀಧರ್, ನಮ್ಮೂರಿನ ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿದ್ದು, ಇವುಗಳ ಸಚ್ಛವಾಗಿಟ್ಟು ಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆ ವತಿಯಿಂದ ರಾಜ್ಯದೆಲ್ಲೆಡೆ ಶ್ರದ್ಧಾ ಕೇಂದ್ರಗಳ ಸಚ್ಛತಾ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ. ಜೊತೆಗೆ ಸ್ಥಳೀಯವಾಗಿ ಸಂಘ-ಸಂಸ್ಥೆಗಳವರ ಸಹಕಾರ ಪಡೆದು ಸಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದರು. ಸಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಪಾಹಾರ ವ್ಯವಸ್ಥೆ ಕಲ್ಪಿಸಿದ್ದ ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ ಮಾತನಾಡಿ, ಇಂತಹ ಸಚ್ಛತಾ ಕಾರ್ಯ ಅನಿವಾರ್ಯವಾಗಿದೆ ಎಂದರು.
ವಾರದಲ್ಲಿ 104 ದೇವಾಲಯ ಸಚ್ಛತೆ: ಶ್ರದ್ಧಾ ಕೇಂದ್ರಗಳ ಸಚ್ಛತಾ ಕಾರ್ಯ ಕ್ರಮದಡಿ ಕಳೆದ ಒಂದು ವಾರದಿಂದ ತಾಲೂಕಿನ 104 ದೇವಾಲಯಗಳ ಆವರಣವನ್ನು 3,370 ಸ್ವಯಂ ಸೇವಕರು ಸೇರಿ ಸಚ್ಛಗೊಳಿಸಲಾಗಿದೆ ಎಂದು ಜಿಲ್ಲಾ ಯೋಜನಾಧಿಕಾರಿ ತಿಳಿಸಿದರು.
ರೋಟರಿ ಅಧ್ಯಕ್ಷ ಪಾಂಡು ಕುಮಾರ್, ತಾ. ಯೋಜನಾಧಿಕಾರಿಗಳಾದ ಧನಂಜಯ್, ರಮೇಶ್, ತಾಲೂಕು ಲೆಕ್ಕಪರಿಶೋಧಕ ಜಯಂತ್, ಮೇಲ್ವಿಚಾರಕಾರದ ರಾಣಿ, ರಮೇಶ್, ಜೆವಿಕೆಯ ಶೃತಿ, ಯೋಜನಾ ಕಚೇರಿಯ ಅಶೋಕ್, ಒಕ್ಕೂಟದ ಅಧ್ಯಕ್ಷರಾದ ರಾಜಮ್ಮ, ಸಂಪಿಗೆ ಸೇರಿದಂತೆ ಕಚೇರಿ ಸಿಬ್ಬಂದಿ ಹಾಗೂ ಸೇವಾಪ್ರತಿ ನಿಧಿಗಳು ಹಾಗೂ ಸ್ವಯಂಸೇವಕರು ಇದ್ದರು.