ಸುಬ್ರಹ್ಮಣ್ಯ : ದೇಗುಲ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿವೆ. ಭಕ್ತರ ಅನು ಕೂಲಕ್ಕೆ
ತಕ್ಕಂತೆ ಕೆಲಸಗಳು ನಡೆದಿವೆ. ಮತ್ತಷ್ಟೂ ಅಭಿವೃದ್ಧಿ ಕಾರ್ಯಗಳು ಇನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಡೆಯಲಿವೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯಗಳ ಕೊರತೆಯಾಗದ ರೀತಿಯಲ್ಲಿ ಸೌಲಭ್ಯ ಒದಗಿಸಲು ಸಿದ್ಧವಿರುವುದಾಗಿ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಸುಬ್ರಹ್ಮಣ್ಯ ದೇಗುಲದ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ವ್ಯವಸ್ಥಾಪನ ಸಮಿತಿ ಸದಸ್ಯರ ವಾಹನ ಪಾರ್ಕಿಂಗ್ ನಿಲ್ದಾಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಸ್ರ ಸಂಖ್ಯೆಯಲ್ಲಿ ಭಕ್ತರು ನಿತ್ಯವೂ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ದೇಗುಲದ ಜವಾಬ್ದಾರಿ. ಅವರ ಆವಶ್ಯಕತೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ಈಗ ನಡೆದಿವೆ. ಇನ್ನುಳಿದ ಕಾರ್ಯಗಳನ್ನು ಮುಂದೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ, ಸಹಾಯಕ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ್ ಪೇರಾಲ್, ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೇ| ಮೂ| ಡಾ| ಎಚ್. ರಾಜ್‌ಗೋಪಾಲ್, ಆಗಮ ಪಂಡಿತ ಪ್ರೊ| ಶಿವಕುಮಾರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಹೇಶ್ ಭಟ್ ಕರಿಕ್ಕಳ, ಬಾಲಕೃಷ್ಣ ಬಲ್ಲೇರಿ, ರಾಜೀವಿ ಆರ್. ರೈ, ದಮಯಂತಿ ಕೂಜುಗೋಡು, ಮಾಧವ ಡಿ., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ಬಂಗಾಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ರಂಗಯ್ಯ ಶೆಟ್ಟಿಗಾರ್, ವಿಮಲಾ ರಂಗಯ್ಯ, ಯಶವಂತ ರೈ, ಸತೀಶ್ ಕೂಜುಗೋಡು, ಎಂಜಿನಿಯರ್ ಉದಯಕುಮಾರ್, ಸುಬ್ರಹ್ಮಣ್ಯ ರಾವ್, ರವೀಂದ್ರ ರುದ್ರಪಾದ, ಉದಯಕುಮಾರ್ ಉಪಸ್ಥಿತರಿದ್ದರು.