2013ರಿಂದ 2022ರವರೆಗೆ ದಶಕದಲ್ಲಿ 0.2 ಡಿ.ಸೆ.ನಂತೆ ಮಾನವ ಉತ್ತೇಜಿತ ತಾಪಮಾನವು ಹೆಚ್ಚುತ್ತಿದ್ದು, ಇದು ಮಾನವಕುಲಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಈ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Advertisement
ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗಲು ಮಾನವನ ಚಟುವಟಿಕೆಗಳೇ ಕಾರಣ ಎನ್ನುತ್ತದೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ ಸರ್ಕಾರಿ ಸಮಿತಿ(ಐಪಿಸಿಸಿ) ವರದಿ. ಮನುಷ್ಯರ ಚಟುವಟಿಕೆಗಳು ಹಸಿರುಮನೆ ಇಂಧನಗಳ ಹೊರಸೂಸುವಿಕೆಯನ್ನು ಹೆಚ್ಚಿಸಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿದೆ ಎಂದೂ ಈ ವರದಿ ಹೇಳಿದೆ.
ಕಳೆದ ಒಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 54 ಗಿಗಾ ಟನ್‌ಗಳನ್ನು ಇಂಗಾಲದ ಡೈಆಕ್ಸೆ„ಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹಸಿರುಮನೆ ಇಂಧನ ಹೊರಸೂಸುವಿಕೆಯು ಸಾರ್ವಕಾಲಿಕ ದಾಖಲೆ ಬರೆದಿದೆ ಎಂದೂ ವರದಿ ತಿಳಿಸಿದೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ಯುಎಇಯಲ್ಲಿ ಕಾಪ್28 ಹವಾಮಾನ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ವರದಿ ಬಿಡುಗಡೆಯಾಗಿದೆ. 2050ರೊಳಗೆ ಜಾಗತಿಕ ತಾಪಮಾನವನ್ನು 1.5 ಡಿ.ಸೆ.ನಲ್ಲಿ ಮಿತಿಗೊಳಿಸುವ ನಿಟ್ಟಿನಲ್ಲಿ ಇಡಲಾದ ಹೆಜ್ಜೆಗಳ ಕುರಿತು ಈ ಸಮ್ಮೇಳನದಲ್ಲಿ ಪರಿಶೀಲನೆ ಕೈಗೊಳ್ಳಲಾಗುತ್ತದೆ. ದೇಶಗಳು ಮಾಡಬೇಕಾದ್ದೇನು?
ಜಗತ್ತಿನ ತಾಪಮಾನದ ಮೇಲೆ ಎಂದೆಂದೂ ಸರಿಪಡಿಸಲಾಗದಂಥ ಹಾನಿ ಆಗಿದೆ. ಈಗ ನಮ್ಮ ಮುಂದಿರುವ ದಾರಿಯೆಂದರೆ, 2015ರ ಪ್ಯಾರಿಸ್ ಒಪ್ಪಂದದ ವೇಳೆ ನಿಗದಿಪಡಿಸಲಾದ ತಾಪಮಾನದ ಮಿತಿಯೊಳಗೆ ಇರಲು ಪ್ರಯತ್ನಿಸುವುದು. ಅಂದರೆ,
– 2035ರೊಳಗೆ ವಿಶ್ವವು ಹಸಿರುಮನೆ ಇಂಧನ ಹೊರಸೂಸುವಿಕೆಯನ್ನು ಶೇ.60ರಷ್ಟು ಕಡಿತಗೊಳಿಸಬೇಕು.
– ಇಂಗಾಲದ ಡೈ ಆಕ್ಸೆ„ಡ್, ಮೀಥೇನ್ ಹಾಗೂ ಪಳೆಯುಳಿಕೆ ಇಂಧನದ ಸುಡುವಿಕೆಯು 250 ಶತಕೋಟಿ ಟನ್‌ಗಳ ಮಿತಿ ಮೀರಬಾರದು.
– 2030ರೊಳಗಾಗಿ ಇಂಗಾಲದ ಡೈ ಆಕ್ಸೆ„ಡ್ ಹೊರಸೂಸುವಿಕೆಯನ್ನು ಕನಿಷ್ಠ ಶೇ.40ರಷ್ಟು ತಗ್ಗಿಸುವುದು.