Advertisement

ತಾಪಮಾನ: ಪಟ್ಟಿಯಲ್ಲಿ ದೇಶದ 10 ನಗರ

11:04 PM Jun 03, 2019 | mahesh |

ಹೊಸದಿಲ್ಲಿ: ರವಿವಾರ ಅತಿ ಹೆಚ್ಚು ಉಷ್ಣಾಂಶ ದಾಖಲಾದ ವಿಶ್ವದ 15 ನಗರಗಳ ಪಟ್ಟಿಯಲ್ಲಿ ಭಾರತದ 9 ನಗರ (ಅಥವಾ ಪಟ್ಟಣಗಳು) ಕಾಣಿಸಿಕೊಂಡಿವೆ. ಅಲ್ಲದೆ, ಈ ನಗರಗಳಲ್ಲಿ ಕಾಣಿಸಿಕೊಂಡಿರುವ ಈ ಗರಿಷ್ಠ ಉಷ್ಣಾಂಶವು ಕಳೆದ 65 ವರ್ಷಗಳ ಮುಂಗಾರು ಪೂರ್ವ ಅವಧಿಯಲ್ಲಿ ಕಾಣಿಸಿಕೊಂಡ ಅತಿ ಹೆಚ್ಚಿನ ಉಷ್ಣಾಂಶ ಎನ್ನಲಾಗಿದ್ದು, ಇದು ಹೊಸ ರೀತಿಯ ಕಳವಳ ಸೃಷ್ಟಿಸಿದೆ.

Advertisement

ಹವಾಮಾನ ಸಂಬಂಧಿ ಮಾಹಿತಿ ನೀಡುವ ಜಾಲತಾಣ “ಎಲ್‌ ಡೊರಾಡೊ’ ಎಂಬ ಸಂಸ್ಥೆ ತಯಾರಿಸಿರುವ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ 9 ನಗರಗಳಲ್ಲಿ ರಾಜಸ್ಥಾನದ “ಚುರು’ ಅಗ್ರಸ್ಥಾನದಲ್ಲಿದೆ. ಭಾನುವಾರ ಅಲ್ಲಿ ಗರಿಷ್ಠ ಉಷ್ಣಾಂಶ 48.9 ಡಿ.ಸೆ. ದಾಖಲಾಗಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 48.6 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಇದು ಪಟ್ಟಿಯಲ್ಲಿರುವ ಭಾರತದ 2ನೇ ಅತಿ ಉಷ್ಣಾಂಶದ ಪಟ್ಟಣ ಎನಿಸಿಕೊಂಡಿದೆ. ಉತ್ತರ ಪ್ರದೇಶದ ಬಂಡಾ (47.4 ಡಿ.ಸೆ.), ಹರಿಯಾಣದ ನನುìವಲ್‌ (47.2 ಡಿ.ಸೆ.) ನಗರಗಳು 3ನೇ ಹಾಗೂ 4ನೇ ನಗರಗಳಾಗಿ ಹೊರಹೊಮ್ಮಿವೆ. ಇನ್ನು, ಹೊಸದಿಲ್ಲಿ, ಅಗರ್ತಲಾ, ಜೈಪುರ, ಕೋಟಾ, ಹೈದರಾಬಾದ್‌, ಲಕ್ನೋಗಳೂ (ತಲಾ 45 ಡಿಗ್ರಿಗಿಂತ ಮೇಲ್ಪಟ್ಟ ಉಷ್ಣಾಂಶ) ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next