Advertisement

ವಿದ್ಯಾರ್ಥಿಗಳಿಗೆ ಸಂವಿಧಾನ ಮಹತ್ವ ತಿಳಿಸಿ

12:46 PM Dec 07, 2017 | Team Udayavani |

ಹುಣಸೂರು: ದೇಶಕ್ಕಾಗಿ ಅಂಬೇಡ್ಕರ್‌ ರೂಪಿಸಿರುವ ಸಂವಿಧಾನದ ಬಗ್ಗೆ  ಶಾಲಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿ, ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವ ತಿಳಿಸುವ ಕಾರ್ಯವಾಗಬೇಕಿದೆ ಎಂದು ತಾಪಂ ಇಒ ಸಿ.ಆರ್‌.ಕೃಷ್ಣಕುಮಾರ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಬಾಚಳ್ಳಿ ಅಂಬೇಡ್ಕರ್‌ ಕಾಲೋನಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್‌ರ 62ನೇ ಪರಿನಿರ್ವಾಣದ ಅಂಗವಾಗಿ ಆಯೋಜಿಸಿದ್ದ ಬಡವರ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಅಂಬೇಡ್ಕರರು ಸಂವಿಧಾನ ರಚಿಸಿದ್ದಾರೆಂದು ಹೇಳುತ್ತೇವೆ ಹೊರತು ಆ ಬಗ್ಗೆ ಅಧ್ಯಯನ ನಡೆಸದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. 

ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ, ಈ  ಕಾಲೋನಿಯಲ್ಲಿರುವ 40ಕುಟುಂಬಗಳ ಪೈಕಿ 33 ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾಲೋನಿ ಜನರು ಯಾವ ಸಮುದಾಯಕ್ಕೆ ಸೇರುತ್ತಾರೆನ್ನುವ ಕುರಿತು ಗಿರಿಜನ ಸಂಶೋಧನಾ ಕೇಂದ್ರ ನಡೆಸಲಿದೆ. ಆ ನಂತರದಲ್ಲಿ  ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆಂದರು.

ಕಾಲೋನಿ ನಿವೇಶನ ರಹಿತ ಕುಟುಂಬದವರು ವಸತಿ ಯೋಜನೆಯಡಿ ನಿವೇಶನ ಮತ್ತು ಮನೆಗಳನ್ನು ಒದಗಿಸಬೇಕೆಂದು ಇಒ, ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ದಸಂಸದ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಸಂಚಾಲಕ ದೇವೇಂದ್ರ, ಗಜೇಂದ್ರ, ಮುಖಂಡರಾದ ರಾಜು, ಶಿವಲಿಂಗು, ಗೋವಿಂದ, ಶೇಖರ, ಹರೀಶ, ಗ್ರಾಮಲೆಕ್ಕಾಧಿಕಾರಿ ಶಿವಕುಮಾರ್‌, ಗೋವಿಂದನಹಳ್ಳಿ ಗ್ರಾಪಂ ಕಾರ್ಯದರ್ಶಿ ಲೋಕೇಶ್‌, ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next