Advertisement

Telgi stamp paper scam: ಕರ್ನಾಟಕದ ಓರ್ವ ಸೇರಿ 5 ಮಂದಿಗೆ ಸಜೆ

09:28 PM Dec 31, 2024 | Team Udayavani |

ಅಹಮದಾಬಾದ್‌: ತೆಲಗಿ ಸ್ಟಾಂಪ್‌ ಪೇಪರ್‌ ಹಗರಣದಲ್ಲಿ ಐವರು ಅಪರಾಧಿಗಳಿಗೆ ಗುಜರಾತ್‌ನ ಸಿಬಿಐ ಕೋರ್ಟ್‌ 3 ವರ್ಷ ಜೈಲು ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.

Advertisement

ಅಹಮದಾಬಾದ್‌ನ ಫ‌ಲ್ಗುಣಿ ಪಟೇಲ್‌, ಕಿಶೋರ್‌ ಪಟೇಲ್‌, ಕರ್ನಾಟಕದ ಪ್ರಶಾಂತ್‌ ನಿಂಗಪ್ಪ ಪಾಟೀಲ್‌, ಮಹಾರಾಷ್ಟ್ರದ ಅಮ್ಜದ್‌ ಅಲಿ, ರಾಜ್‌ಕೋಟ್‌ನ ಝಾಕಿರ್‌ ಹುಸೇನ್‌ ಶಿಕ್ಷೆಗೆ ಒಳಗಾದವರು.

ಪ್ರಕರಣದ 16 ಆರೋಪಿಗಳ ಪೈಕಿ ಪ್ರಮುಖ ಆರೋಪಿ ಅಬ್ದುಲ್‌ ಕರಿಂ ತೆಲಗಿ ಮತ್ತು ಇತರ 8 ಜನರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು 2009ರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ತೆಲಗಿ 2017ರಲ್ಲಿ ಜೈಲಿನಲ್ಲಿಯೇ ಮೃತಪಟ್ಟಿದ್ದ. 2001ರಲ್ಲಿ ಗುಜರಾತ್‌ನ ಸೂರತ್‌ ಮತ್ತು ಅಹಮದಾಬಾದ್‌ನಲ್ಲಿ ಈ ಸ್ಟಾಂಪ್‌ ಪೇಪರ್‌ ಹಗರಣ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next